ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಯೂಕ್ರೇನ್ನ ಹಲವೆಡೆ ಇತ್ತೀಚೆಗೆ ಹೆಚ್ಚುತ್ತಿರುವ ಹಗೆತನದ ದೃಷ್ಟಿಯಿಂದ ಈ ಸೂಚನೆ ನೀಡಲಾಗುತ್ತಿದೆ ಎಂಬುದಾಗಿ ತಿಳಿಸಿರುವ ಅಲ್ಲಿನ ಭಾರತೀಯ ರಾಯಭಾರ ಕಚೇರಿ, ಎರಡು ಮಹತ್ವದ ಕಿವಿಮಾತುಗಳನ್ನು ಹೇಳಿದೆ.
ಈಗಾಗಲೇ ಯೂಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ಅಲ್ಲಿಂದ ಬೇಗನೆ ಸ್ವದೇಶಕ್ಕೆ ಹೊರಡಲು ಸಲಹೆ ನೀಡಿದೆ. ಹಾಗೆಯೇ ಭಾರತೀಯರು ಸದ್ಯ ಯೂಕ್ರೇನ್ಗೆ ಬರದಂತೆಯೂ ಅದು ಸೂಚನೆಯನ್ನು ನೀಡಿದೆ.