HEALTH TIPS

ಕ್ಯಾನ್ಸರ್ ಪೀಡಿತ ಆರೋಪಿ ಜಾಮೀನು ರದ್ದತಿಗೆ ಅರ್ಜಿ: ಸುಪ್ರೀಂ ಕೋರ್ಟ್ ತರಾಟೆ

 

          ನವದೆಹಲಿ: ಕ್ಯಾನ್ಸರ್‌ನಿಂದ ಬಳಲುತ್ತಿರುವ ಆರೋಪಿಯ ಜಾಮೀನು ರದ್ದುಪಡಿಸಲು ಅರ್ಜಿ ಸಲ್ಲಿಸಿದ್ದ ಜಾರಿ ನಿರ್ದೇಶನಾಲಯವನ್ನು (ಇ.ಡಿ) ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 'ನ್ಯಾಯಾಲಯದ ಸಮಯ, ಶುಲ್ಕ ಮತ್ತು ಕಾಗದಪತ್ರಗಳನ್ನು ವ್ಯಯ ಮಾಡಬಾರದು' ಎಂದು ಸಲಹೆ ಮಾಡಿದೆ.

               ₹ 24 ಕೋಟಿ ದುರ್ಬಳಕೆ ಪ್ರಕರಣದ ಸಂಬಂಧ ಖಾಸಗಿ ಬ್ಯಾಂಕ್‌ನ ಸಿಬ್ಬಂದಿಯೊಬ್ಬರ ಬಂಧನ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.

                 ಜಾಮೀನು ವಿರೋಧಿಸಿ ವಿಶೇಷ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿದ್ದ ಅಧಿಕಾರಿ ₹ 1 ಲಕ್ಷ ಶುಲ್ಕ ಭರಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ, ಎಂ.ಎಂ.ಸುಂದ್ರೇಶ್‌ ಅವರಿದ್ದ ಪೀಠ ಆದೇಶಿಸಿತು.

           ಇ.ಡಿ. ಇಂತಹ ಅರ್ಜಿ ಸಲ್ಲಿಸಬಾರದಿತ್ತು. ಈ ಅರ್ಜಿಯನ್ನು ವಜಾ ಮಾಡಲಾಗಿದೆ. ವಿಧಿಸಲಾದ ₹ 1 ಲಕ್ಷ ಶುಲ್ಕವನ್ನು ಅರ್ಜಿ ಸಲ್ಲಿಸಲು ಅನುಮತಿ ನೀಡಿದ್ದ ಅಧಿಕಾರಿಯ ವೇತನದಿಂದ ಕಡಿತ ಮಾಡಬೇಕು ಎಂದು ಪೀಠವು ಹೇಳಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries