ನವದೆಹಲಿ: 'ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (ಎನ್‌ಎಸ್‌ಸಿಎಸ್) ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರು (ಎನ್‌ಎಸ್‌ಎ) ನೀಡುವ ಮಾಹಿತಿ ಹಾಗೂ ಹಂಚಿಕೊಳ್ಳುವ ವಿಚಾರಗಳನ್ನು ಕಡೆಗಣಿಸಬಾರದು. ಅವುಗಳನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರು ಹಾಗೂ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ' ಎಂದು ಮೂಲಗಳು ಭಾನುವಾರ ತಿಳಿಸಿವೆ.
ಶುಕ್ರವಾರ ಸುಮಾರು 5 ಗಂಟೆ ಸಭೆ ನಡೆಸಿದ ಮೋದಿ ಅವರು ಭಾರತದ ಕಾರ್ಯತಂತ್ರದ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಬೇಕೆಂದು ಸಲಹೆ ನೀಡಿದ್ದಾರೆ. ರಾಷ್ಟ್ರೀಯ ಭದ್ರತಾ ಮಂಡಳಿಯ ಮಾಹಿತಿಗೆ ಮಹತ್ವ ನೀಡುವಂತೆಯೂ ತಾಕೀತು ಮಾಡಿದ್ದಾರೆ. ನೀತಿ ರೂಪಿಸುವ ಪ್ರಕ್ರಿಯೆ ಕ್ರಿಯಾತ್ಮಕವಾಗಿದ್ದು, ಕಾಲಕ್ಕೆ ಅನುಗುಣವಾಗಿ ಅದರಲ್ಲಿ ಸುಧಾರಣೆ ತರುವ ಅಗತ್ಯತೆಯನ್ನೂ ಒತ್ತಿ ಹೇಳಿದ್ದಾರೆ' ಎಂದೂ ಮೂಲಗಳು ಮಾಹಿತಿ ನೀಡಿವೆ.
ಎನ್‌ಎಸ್‌ಸಿಎಸ್, ಎನ್‌ಎಸ್‌ಎ ನೀಡುವ ಮಾಹಿತಿ ಗಂಭೀರವಾಗಿ ಪರಿಗಣಿಸಿ: ಮೋದಿ
0
ಅಕ್ಟೋಬರ್ 03, 2022
Tags