ಕಾಸರಗೋಡು: ಭಾರತೀಯ ವೈದ್ಯಕೀಯ ಇಲಾಖೆ ಹಾಗೂ ರಾಷ್ಟ್ರೀಯ ಆಯುಷ್ ಮಿಷನ್ ಜಂಟಿ ಆಶ್ರಯದಲ್ಲಿ 7ನೇ ರಾಷ್ಟ್ರೀಯ ಆಯುರ್ವೇದ ದಿನವನ್ನು ಕಾಸರಗೋಡಿನಲ್ಲಿ ಆಚರಿಸಲಾಯಿತು. ಕಾಞಂಗಾಡಿನ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು.
'ಪ್ರತಿದಿನ ಪ್ರತಿ ಮನೆಯಲ್ಲಿ ಆಯುರ್ವೇದ' ಎಂಬ ಸಂದೇಶದೊಂದಿಗೆ ಈ ವರ್ಷ ಜಿಲ್ಲಾದ್ಯಂತ ಆಯುರ್ವೇದದ ಬಗ್ಗೆ ಪ್ರಚಾರಕಾರ್ಯ ನಡೆಯಲಿರುವುದು. ಕಾಞಂಗಾಡು ಮಗರಸಭೆ ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು. ಪಿ.ಎನ್.ಪಣಿಕ್ಕರ್ ಆಯುರ್ವೇದ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಐ.ಕೆ.ಮಧುಸೂದನನ್ ಉಪಸ್ಥಿತರಿದ್ದರು. ಚಿಮೇನಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಿಎಂಒ ಡಾ.ಎಂ.ಪಿ.ಪೂರ್ಣಿಮಾ ಸ್ವಾಗತಿಸಿದರು. ಕಾಸರಗೋಡು ಆಯುರ್ವೇದಿಕ್ ಆಸ್ಪತ್ರೆಯ ಸಿಎಂಒ ಡಾ.ಟಿ.ಕೆ.ವಿಜಯಕುಮಾರ್ ವಂದಿಸಿದರು. ಈ ಸಂದರ್ಭ ಮೆಗಾ ವೈದ್ಯಕೀಯ ಶಿಬಿರ, ರಸಪ್ರಶ್ನೆ ಕಾರ್ಯಕ್ರಮ, ಜಾಗೃತಿ ತರಗತಿ ನಡೆಯಿತು.
ರಾಷ್ಟ್ರೀಯ ಆಯುರ್ವೇದ ದಿನಾಚರಣೆ
0
ಅಕ್ಟೋಬರ್ 28, 2022
Tags