ಕುಂಬಳೆ: ಅ.25 ರಂದು ಘಟಿಸುವ ಖಂಡಗ್ರಾಸ ಸೂರ್ಯಗ್ರಹಣದ ಪ್ರಯುಕ್ತ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಸನ್ನಿಧಿಯಲ್ಲಿ ಮಧ್ಯಾಹ್ನದ ಪೂಜೆ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ. ಮಧ್ಯಾಹ್ನ ಪ್ರಸಾದ ಭೋಜನ ಇರುವುದಿಲ್ಲ. ಸಂಜೆ 6.35 ಕ್ಕೆ ಗರ್ಭಗೃಹದ ಬಾಗಿಲು ತೆರೆಯಲಾಗುವುದೆಂದು ಶ್ರೀಸನ್ನಿಧಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗ್ರಹಣದ ಪ್ರಯುಕ್ತ ಮಂಜೇಶ್ವರ ಶ್ರೀಮದ್ ಅನಂತೇಶ್ವರ, ಐಲ ಶ್ರೀದುರ್ಗಾಪರಮೇಶ್ವರಿ, ಬಾಯಾರು ಶ್ರೀಪಂಚಲಿಂಗೇಶ್ವರ, ಮಂಜೇಶ್ವರ ಶನೈಶ್ಚರ, ಅನಂತಪುರ ಶ್ರೀಅನಂತಪದ್ಮನಾಭ, ಮುಜುಂಗಾವು ಶ್ರೀಪಾರ್ಥಸಾರಥಿ, ಅಡೂರು ಶ್ರೀಮಹಾಲಿಂಗೇಶ್ವರ, ಮಧೂರು ಶ್ರೀಸಿದ್ದಿವಿನಾಯಕ, ಅಗಲ್ಪಾಡಿ ಶ್ರೀದುರ್ಗಾಪರಮೇಶ್ವರಿ, ಪೆರಡಾಲ ಶ್ರೀಉದನೇಶ್ವರ, ಕಾರ್ಮಾರು ಶ್ರೀಮಹಾವಿಷ್ಣುಮೂರ್ತಿ, ಕಾಟುಕುಕ್ಕೆ ಶ್ರೀಸುಬ್ರಾಯ, ಬಜಕ್ಕೂಡ್ಲು ಶ್ರೀಮಹಾಲಿಂಗೇಶ್ವರ, ಬಂಗ್ರಮಂಜೇಶ್ವರ ಶ್ರೀಕೀರ್ತೇಶ್ವರ, ಶೇಡಿಕಾವು ಶ್ರೀಶಿವ ದೇವಾಲಯಗಳಲ್ಲಿ ಮಧ್ಯಾಹ್ನದ ಪೂಜೆಗಳು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೂರ್ಯಗ್ರಹಣ-ದೇವಾಲಯಗಳಲ್ಲಿ ಮಧ್ಯಾಹ್ನ ಪೂಜೆಗಳಿಲ್ಲ
0
ಅಕ್ಟೋಬರ್ 20, 2022