ಇಡುಕ್ಕಿ: ಎಸ್.ಐ ಕಚೇರಿಯ ಕೊಠಡಿಯು ಕಳ್ಳಭಟ್ಟಿ ಕುಡಿಯುವ ಕೇಂದ್ರವಾಗಿ, ಲಾಕಪ್ ಕೊಠಡಿಯು ಕಳ್ಳಬಟ್ಟಿ ತಯಾರಿಸುವ ಕೋಣೆಯಾಗಿ, ಲಾಕಪ್ ಕೊಠಡಿ ಈಗ ಅಡುಗೆ ಕೋಣೆಯಾಗಿ ಮಾರ್ಪಟ್ಟಿದೆ.
ಈ ಹಿಂದೆ ರೌಡಿಗಳು, ಕಳ್ಳರನ್ನು ನಿಯಂತ್ರಿಸಲು ನಿರ್ಮಿಸಿದ್ದ ಪೋಲೀಸ್ ಠಾಣೆ ಇಂದು ಮದ್ಯದ ಅಂಗಡಿ ಎಂಬ ಖ್ಯಾತಿ ಪಡೆದಿದೆ. ಇಲ್ಲಿಯ ಹಂದಿಮಾಂಸ ಸೇವನೆಗೆ ದೂರದ ಊರುಗಳಿಂದಲೂ ಜನ ಬರುತ್ತಾರೆ.
ನಾವು ಕೇರಳ-ತಮಿಳುನಾಡು ಗಡಿಯಲ್ಲಿರುವ ಕಂಬಮ್ಮೆಟ್ಟಿ ಪೋಲೀಸ್ ಠಾಣೆಯ ಬಗ್ಗೆ ಮಾತನಾಡುತ್ತಿದ್ದೇವೆ. ಕಳ್ಳಬಟ್ಟಿ ಕುಡಿದು ಅಪರಾಧ ಎಸಗುವವರನ್ನು ಬಂಧಿಸಿ ಠಾಣೆಗೆ ಕರೆತರುವ ಪರಿಪಾಠವಾದರೆ ಇಲ್ಲಿ ಠಾಣೆಯಲ್ಲೇ ಕುಳಿತು ಮದ್ಯ ಸೇವಿಸಬಹುದು, ಆರಾಮವಾಗಿ.
ವರ್ಷಗಳ ಹಿಂದೆ 1980ರಲ್ಲಿ ಟಿ.ಕೆ.ರಾಮಕೃಷ್ಣನ್ ಅವರು ಗೃಹ ಸಚಿವರಾಗಿದ್ದಾಗ ಕಂಬಮ್ಮೆಟ್ಟಿಗೆ ಪೋಲೀಸ್ ಠಾಣೆ ಮಂಜೂರು ಮಾಡಲಾಗಿತ್ತು. ತಮಿಳುನಾಡಿನಿಂದ ದರೋಡೆ ಗ್ಯಾಂಗ್‍ಗಳ ಉಪದ್ರವವನ್ನು ಹೋಗಲಾಡಿಸಲು ಇದನ್ನು ಪ್ರಾರಂಭಿಸಲಾಯಿತು. ಅಂದು ಇಲ್ಲಿ ಒಬ್ಬ ಎಸ್ ಐ ಹಾಗೂ ನಾಲ್ವರು ಪೋಲೀಸರು ಕರ್ತವ್ಯದಲ್ಲಿದ್ದರು. ಸುಣ್ಣ ಬಳಿದ ಏಕೈಕ ಕಟ್ಟಡ ಇದಾಗಿತ್ತು.
ಎರಡು ದಶಕಗಳ ಕಾಲ ಪೋಲೀಸ್ ಠಾಣೆಯಾಗಿ ಕಾರ್ಯನಿರ್ವಹಿಸಿತ್ತು. ಆದರೆ ನಂತರ ಹೊಸ ಕಟ್ಟಡ ನಿರ್ಮಿಸಿ ಠಾಣೆಯನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು. ಅದರೊಂದಿಗೆ ಇಲ್ಲಿಯ ಹಳೆಯ ಠಾಣೆ ಮದ್ಯದಂಗಡಿಯಾಗಿ ಮಾರ್ಪಟ್ಟದ್ದು ವ್ಯಂಗ್ಯವೆನ್ನಲೇ ಬೇಕು. ಅದೇನೇ ಇರಲಿ, ಬಹುತೇಕ ಜನರು ಈಗ ಈ ಅಂಗಡಿಯನ್ನು ಹುಡುಕಿಕೊಂಡು ಕಂಬಮ್ಮೆಟ್ಟಿಗೆ ಬರುತ್ತಾರೆ.
ಎಸ್.ಐ. ಕುರ್ಚಿಯ ಮೇಲೆ ಕುಳಿತು ಇಲ್ಲಿ ಮದ್ಯ ಸೇವಿಸಬಹುದು: ಮದ್ಯದಂಗಡಿಯಾಗಿ ಮಾರ್ಪಟ್ಟ ಪೋಲೀಸ್ ಠಾಣೆ
0
ಅಕ್ಟೋಬರ್ 30, 2022
Tags