ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸೇವಾ ಸಮಿತಿ ವತಿಯಿಂದ ನಡೆಸಿಕೊಂಡು ಬರಲಾಗುವ ಭಜನಾ ಕಾರ್ಯಕ್ರಮ ಮತ್ತು ವಿಶೇಷ ಕಾರ್ತಿಕ ಪೂಜಾ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಕರಂದಕ್ಕಾಡು ಶ್ರೀ ವೀರಹನುಮಾನ್ ಮಂದಿರದಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವರೆಗೆ ಭಜನಾ ಶೋಭಾಯಾತ್ರೆ ನಡೆಯಿತು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಿ.ವಿ ಪೊದುವಾಳ್ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಭಜನಾ ತಂಡಗಳಿಗೆ ಸ್ವಾಮೀಜಿ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು. ಸೇವಾ ಸಮಿತಿ ರಕ್ಷಾಧಿಕಾರಿ ಡಾ. ಅನಂತ ಕಾಮತ್ ಉಪಸ್ಥಿತರಿದ್ದರು. ಪ್ರಧಾನ ಸಂಚಾಲಕ ಪಿ.ಮುರಳೀಧರನ್ ಸ್ವಾಗತಿಸಿದರು. ಉಪಾಧ್ಯಕ್ಷ ಕಮಲಾಕ್ಷ ಕೆ.ಎಸ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಭಜನೋತ್ಸವ, ರಂಗ ಪೂಜೆ ನಡೆಯಿತು.
ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಭಜನೋತ್ಸವ, ವಿಶೇಷ ಕಾರ್ತಿಕ ಪೂಜೆ
0
ಅಕ್ಟೋಬರ್ 19, 2022