ತಿರುವನಂತಪುರ: ಕಾನೂನು ಉಲ್ಲಂಘಿಸುವವರನ್ನು ತಡೆಯಲು ಕೇರಳ ಪೋಲೀಸರು ಹೊಸ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ. ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಗಮನಕ್ಕೆ ಬಂದರೆ ಕೇರಳ ಪೆÇಲೀಸರ ‘ಶುಭಯಾತ್ರೆ’ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸಬಹುದು.
ಕಾನೂನನ್ನು ಉಲ್ಲಂಘನೆ ಎಂದು ತೋರಿಸುವ ಪೋಟೋ ಮತ್ತು ವಿಡಿಯೋ ಸಹಿತ ಸಂದೇಶ ಕಳುಹಿಸಬಹುದು ಎಂದು ಕೇರಳ ಪೋಲೀಸರು ಮಾಹಿತಿ ನೀಡಿದ್ದಾರೆ. ಫೇಸ್‍ಬುಕ್‍ನಲ್ಲಿ ಹಂಚಿಕೊಂಡ ಟಿಪ್ಪಣಿಯಲ್ಲಿ, ಅಮೂಲ್ಯವಾದ ಸಂದೇಶವು ಅಪಘಾತಗಳನ್ನು ತಪ್ಪಿಸುತ್ತದೆ ಮತ್ತು ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಸಂದೇಶವನ್ನು ವಾಟ್ಸಾಪ್ ಸಂಖ್ಯೆ 9747001099 ಗೆ ಕಳುಹಿಸಬೇಕು. ಪೋಲೀಸರ ಪ್ರಕಾರ, ಸಂದೇಶದ ಮೇಲೆ ತೆಗೆದುಕೊಂಡ ಕ್ರಮವನ್ನು ಕಳುಹಿಸುವವರಿಗೆ ಏಳು ದಿನಗಳಲ್ಲಿ ತಿಳಿಸಲಾಗುವುದು. ಕೇರಳದ ಒಟ್ಟು ವಾಹನಗಳ ಐದನೇ ಒಂದು ಭಾಗದಷ್ಟು ವಾಹನಗಳನ್ನು ಪೆÇಲೀಸರು ಕಾನೂನು ಉಲ್ಲಂಘನೆಗಾಗಿ ವಶಪಡಿಸಿಕೊಂಡಿದ್ದಾರೆ. ಬೀದಿಗಳಲ್ಲಿಯೂ ದಾಖಲೆಗಳಿಲ್ಲದ ಉಲ್ಲಂಘನೆಗಳು ನಡೆಯುತ್ತವೆ. ಇಂತಹ ಅಜಾಗರೂಕ ಚಾಲಕರನ್ನು ನ್ಯಾಯದ ಕಟಕಟೆಗೆ ತರಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕೇರಳ ಪೆÇಲೀಸರು ತಿಳಿಸಿದ್ದಾರೆ.
ಫೇಸ್ ಬುಕ್ ಪೆÇೀಸ್ಟ್ ನ ಪೂರ್ಣಪಾಠ:
ದಯವಿಟ್ಟು ಗಮನ ಕೊಡಿ..
ಈ ವರ್ಷದ ಆಗಸ್ಟ್ ತಿಂಗಳವರೆಗೆ 29369 ರಸ್ತೆ ಅಪಘಾತಗಳಲ್ಲಿ 2895 ಜನರು ಸಾವನ್ನಪ್ಪಿದ್ದಾರೆ.
ಇತ್ತೀಚೆಗμÉ್ಟೀ ವಡಕಂಚೇರಿಯಲ್ಲಿ ನಡೆದ ಭೀಕರ ಅಪಘಾತ ನಮ್ಮೆಲ್ಲರನ್ನೂ ಕಂಗಾಲಾಗಿಸಿದೆ.
ಕೇರಳದಲ್ಲಿ ಸುಮಾರು ಒಂದೂವರೆ ಕೋಟಿ ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ವಿವಿಧ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ
ಆಗಸ್ಟ್ 2022 ರವರೆಗೆ, ಮೂವತ್ತು ಲಕ್ಷಕ್ಕೂ ಹೆಚ್ಚು (30 01588) ಜನರಿಗೆ ದಂಡ ವಿಧಿಸಲಾಗಿದೆ.
16,657 ಮಂದಿಯನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಮತ್ತು 32,810 ಜನರ ಮೇಲೆ ಕುಡಿದು ವಾಹನ ಚಲಾಯಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ.
ಅಂದರೆ ಒಟ್ಟು ವಾಹನಗಳ ಐದನೇ ಒಂದು ಭಾಗದಷ್ಟು ವಾಹನಗಳು ಕಾನೂನು ಉಲ್ಲಂಘಿಸಿ ಪೆÇಲೀಸರಿಗೆ ಸಿಕ್ಕಿಬಿದ್ದಿವೆ. ಅದಕ್ಕಿಂತಲೂ ಹೆಚ್ಚಾಗಿ ಬೀದಿ ಬೀದಿಗಳಲ್ಲಿ ಕಾನೂನು ಉಲ್ಲಂಘನೆಗಳು ನಡೆಯುತ್ತಿವೆ. ಇಂತಹ ನಿಯಮ ಉಲ್ಲಂಘಿಸುವವರನ್ನು ಕಾನೂನು ಕ್ರಮಕ್ಕೆ ತರಲು ಪೆÇಲೀಸರಿಗೆ ಸಾರ್ವಜನಿಕರ ಸಹಕಾರವೂ ಅಗತ್ಯ.
ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿರುವುದು ಗಮನಕ್ಕೆ ಬಂದರೆ, ಕೇರಳ ಪೆÇಲೀಸರ ‘ಶುಭಯಾತ್ರೆ’ ವಾಟ್ಸಾಪ್ ಸಂಖ್ಯೆಗೆ ಫೆÇೀಟೋ, ವಿಡಿಯೋ ಸಮೇತ ಸಂದೇಶ ಕಳುಹಿಸಬಹುದು. ನಿಮ್ಮ ಅಮೂಲ್ಯ ಸಂದೇಶವು ಅಪಘಾತಗಳನ್ನು ತಪ್ಪಿಸಬಹುದು ಮತ್ತು ಆ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು.
ವಾಟ್ಸಾಪ್ ಸಂದೇಶಕ್ಕೆ ಸಂಖ್ಯೆ - 9747001099
ನಿಮ್ಮ ಸಂದೇಶದ ಮೇಲೆ ತೆಗೆದುಕೊಂಡ ಕ್ರಮವನ್ನು ಏಳು ದಿನಗಳಲ್ಲಿ ನಿಮಗೆ ತಿಳಿಸಲಾಗುತ್ತದೆ.