HEALTH TIPS

ಹಣ, ಸಂಪನ್ಮೂಲಗಳಿಂದ ಭಯೋತ್ಪಾದನೆ ಇನ್ನೂ ಬೆಳೆಯುತ್ತಿದೆ: ವಿಶ್ವಸಂಸ್ಥೆ ಭಯೋತ್ಪಾದನಾ ವಿರೋಧಿ ಸಭೆಯಲ್ಲಿ ಜೈಶಂಕರ್

 

             ಮುಂಬೈ: ಭಯೋತ್ಪಾದನೆಯ ಜೀವನಾಡಿ ಹಣವಾಗಿದ್ದು, ಹಣ, ಸಂಪನ್ಮೂಲಗಳಿಂದ ಭಯೋತ್ಪಾದನೆ ಇನ್ನೂ ಬೆಳೆಯುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಹೇಳಿದ್ದಾರೆ. 

              ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಭೆ ಮುಂಬೈನಲ್ಲಿ ನಡೆಯುತ್ತಿದ್ದು, ಸಭೆಯಲ್ಲಿ ಜೈಶಂಕರ್ ಅವರು, ಭಯೋತ್ಪಾದಕರು ತಮ್ಮ ಸಾಂಸ್ಥಿಕ ಕಾರ್ಯಗಳನ್ನು ನಿರ್ವಹಿಸಲು ಆರ್ಥಿಕ ಸಂಪನ್ಮೂಲಗಳನ್ನು ಹೇಗೆ ಪಡೆಯುತ್ತಿದ್ದಾರೆ? ಎಂಬುದರ ಮೇಲೆ ಬೆಳಕು ಚೆಲ್ಲಿದ್ದಾರೆ. 

              ಸಭೆಯಲ್ಲಿ ಭಾಗಿಯಾಗಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ಮೊದಲಿಗೆ 26/11 ಮುಂಬೈ ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

               ಬಳಿಕ ಮಾತನಾಡಿದ ಅವರು, "ಹಣವು ಭಯೋತ್ಪಾದನೆಯ ಜೀವಾಳ ಎಂದು ನಮಗೆಲ್ಲರಿಗೂ ತಿಳಿದಿದೆ. ಉಗ್ರ ಸಂಘಟನೆಗಳು ತಮ್ಮ ಸಾಂಸ್ಥಿಕ ಕಾರ್ಯಗಳನ್ನು ನಿರ್ವಹಿಸಲು ಮತ್ತು ಚಟುವಟಿಕೆಗಳನ್ನು ಕೈಗೊಳ್ಳಲು ಹಣ ಮತ್ತು ಸಂಪನ್ಮೂಲಗಳು ಬೇಕಾಗುತ್ತವೆ. ಭಯೋತ್ಪಾದನೆ ಈಗಲು ಅಸ್ತಿತ್ವದಲ್ಲಿದ್ದು, ಅದು ತನ್ನ ಸಂಘಟನೆಗಳನ್ನು ವಿಸ್ತರಿಸುತ್ತಿದೆ. ಇದಕ್ಕಾಗಿ ಅಗತ್ಯ ಆರ್ಥಿಕ ವ್ಯವಸ್ಥೆ ಹಾಗೂ ಸಂಪನ್ಮೂಲಗಳನ್ನು ಪಡೆದುಕೊಳ್ಳುತ್ತಿದೆ. ಭಯೋತ್ಪಾದನೆಯನ್ನು ಎದುರಿಸುವ ಪ್ರಮುಖ ಅಂಶವೆಂದರೆ ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವುದು. ಇಂದು, ಭಯೋತ್ಪಾದನೆ ನಿಗ್ರಹ ಸಮಿತಿಯು ಸ್ಥಳೀಯ ಮತ್ತು ಪ್ರಾದೇಶಿಕ ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಹೇಗೆ ನಿಯಂತ್ರಿಸುವುದು ಎಂಬುದರ ಕುರಿತು ತಜ್ಞರು ವಿವರಿಸಲಿದ್ದಾರೆಂದು ಹೇಳಿದರು. 

                 ನವೆಂಬರ್ 26, 2008 ರಂದು, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ದಿಂದ ತರಬೇತಿ ಪಡೆದ 10 ಭಯೋತ್ಪಾದಕರು ಮುಂಬೈನಲ್ಲಿ ಅನೇಕ ಪ್ರದೇಶಗಳಲ್ಲಿ ಸಂಘಟಿತ ದಾಳಿಗಳನ್ನು ನಡೆಸಿ 166 ಜನರನ್ನು ಹತ್ಯೆ ಮಾಡಿದ್ದರು.

               10 ಮಂದಿ ಭಯೋತ್ಪಾದಕರ ಪೈಕಿ ಒಬ್ಬನನ್ನು ಜೀವಂತವಾಗಿ ಸೆರೆಹಿಡಿದು, ವಿಚಾರಣೆಗೆ ಒಳಪಡಿಸಲಾಗಿತ್ತು. ಆ ಉಗ್ರರನಿಗೆ ಶಿಕ್ಷೆಯನ್ನೂ ನೀಡಲಾಗಿತ್ತು. ಆದರೆ, 26/11 ದಾಳಿಯ ಪ್ರಮುಖ ಸಂಚುಕೋರರು ಮತ್ತು ಯೋಜಕರು ರಕ್ಷಿಸಲ್ಪಟ್ಟಿದ್ದಾರೆ. ಈ ಕೆಲವು ಭಯೋತ್ಪಾದಕರನ್ನು ನಿಷೇಧಿಸುವ ವಿಷಯಕ್ಕೆ ಬಂದಾಗ, ರಾಜಕೀಯ ಪರಿಗಣನೆಗಳಿಂದಾಗಿ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಇದು ನಮ್ಮ ಸಾಮೂಹಿಕ ವಿಶ್ವಾಸಾರ್ಹತೆ ಮತ್ತು ನಮ್ಮ ಸಾಮೂಹಿಕ ಹಿತಾಸಕ್ತಿಗಳನ್ನು ದುರ್ಬಲಗೊಳಿಸುತ್ತದೆ ಎಂದು ತಿಳಿಸಿದರು.

                     ಇದೇ ವೇಳೆ ಮುಂಬೈ ಉಗ್ರ ದಾಳಿಯ ಸಂತ್ರಸ್ತರು ಎದುರಿಸುತ್ತಿರುವ ಆಘಾತವನ್ನು ಸ್ಮರಿಸುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಕೇಳಿಕೊಂಡ ಜೈಶಂಕರ್ ಅವರು, ಸಭೆಯಲ್ಲಿನ ನಿಮ್ಮ ಉಪಸ್ಥಿತಿಯು ನೀವು ಮತ್ತು ನಿಮ್ಮ ದೇಶಗಳು ಮತ್ತು ವಿವಿಧ ಸಂಘಟನೆಗಳ ಇತರ ಎಲ್ಲಾ ಪಾಲುದಾರರು ಭಯೋತ್ಪಾದನೆಯ ಸಾಮಾನ್ಯ ಬೆದರಿಕೆಯನ್ನು ಎದುರಿಸಲು ತೋರಿಸಿರುವ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದರು.

                   ಭಯೋತ್ಪಾದನೆಯು ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಒಡ್ಡಿರುವ ಗಂಭೀರ ಬೆದರಿಕೆಯಾಗಿದೆ, ವಾಸ್ತವವಾಗಿ, ಇಡೀ ಮಾನವಕುಲಕ್ಕೆ ಇದೊಂದು ಬೆದರಿಕೆಯಾಗಿದೆ. ಈಗಾಗಲೇ ಇದರಿಂದ ನಷ್ಟಕ್ಕೊಳಗಾಗಿರುವ ಜನರ ಧ್ವನಿಯನ್ನು ಕೇಳುತ್ತಿದ್ದೇವೆ. ಆದರೆ, ಆ ನಷ್ಟವನ್ನು ಅಳೆಯಲು ಸಾಧ್ಯವಿಲ್ಲ. ಅಂತರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಸದಸ್ಯರಾಗಿ, ಆ ಆಘಾತವನ್ನು ಸ್ಮರಿಸುವುದು ಮತ್ತು ಭಯೋತ್ಪಾದಕರ ದಾಳಿಗೊಳಗಾಗಿ ನೋವಿನಲ್ಲಿರುವವರಿಗೆ ನ್ಯಾಯ ಒದಗಿಸುವುದು ನಮ್ಮ ಮೇಲಿದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries