ಪೆರ್ಲ: ಕ್ಯಾನ್ಸರ್ ಜಾಗೃತಿ ಮತ್ತು ಅರಿವು-ಕ್ಯಾನ್ಸರ್ ತಪಾಸಣಾ ಶಿಬಿರ ಅ. 22ರಂದು ಪೆರ್ಲ ನಾಲಂದ ಆಟ್ರ್ಸ್ ಮತ್ತು ಸಯನ್ಸ್ ಕಾಲೇಜಿನಲ್ಲಿ ಜರುಗಲಿದೆ. ರಾಷ್ಟ್ರೀಯ ಸೇವಾ ಯೋಜನೆ, ಗ್ರಾಮ ವಿಕಾಸ ಯೋಜನೆ, ಪ್ಯಾಲಿಯೇಟಿವ್ ಕೇರ್ ಯೋಜನೆ, ನಾಲಂದ ಚಾರಿಟೇಬಲ್ ಟ್ರಸ್ಟ್, ಎಣ್ಮಕಜೆ ಗ್ರಾಮ ಪಂಚಾಯಿತಿ, ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆ ಸಹಯೋಗದೊಂದಿಗೆ ಶಿಬಿರ ನಡೆಯಲಿರುವುದು.
ಶಿಬಿರ ಬೆಳಗ್ಗೆ 10ರಿಂದ ಮಾಧ್ಯಾಹ್ನ 1ರ ವರೆಗೆ ನಡೆಯಲಿರುವುದು. ಕೆ.ಎಂ.ಸಿ ಆಸ್ಪತ್ರೆ ಮುಖ್ಯಸ್ಥ ಹಾಗೂ ಕ್ಯಾನ್ಸರ್ ತಜ್ಞರಾದ ಅತಿಯಮಾನ್, ಡಾ. ಅಭಿಷೇಕ್ ಕೃಷ್ಣ, ಡಾ. ರಾಬಿಯಾ, ಡಾ. ಕೋಪಲ್ ಮುಂತಾದವರು ಪಾಲ್ಗೊಳ್ಳುವರು.ಕ್ಯಾನ್ಸರ್ ರೋಗ ಲಕ್ಷಣಗಳು ಹಾಗೂ ರೋಗದ ಕೆಲವು ವಿಧಗಳ ಬಗ್ಗೆ ತಜ್ಞರು ಮಾಹಿತಿ ನೀಡುವರು.
ನಾಳೆ ಪೆರ್ಲದಲ್ಲಿ ಕ್ಯಾನ್ಸರ್ ಜಾಗೃತಿ ಮತ್ತು ಅರಿವು: ಕ್ಯಾನ್ಸರ್ ತಪಾಸಣಾ ಶಿಬಿರ
0
ಅಕ್ಟೋಬರ್ 20, 2022
Tags