ತ್ರಿಶೂರ್: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ರೋಗಿಯನ್ನು ವೈದ್ಯರು ನಿಂದಿಸಿದ ಘಟನೆ ನಡೆದಿದೆ. ಕಾಲು ನೋವಿನಿಂದ ಬಂದ ರೋಗಿಗೆ ವಿಶ್ರಾಂತಿ ಬೇಡ ಎಂದು ವೈದ್ಯರು ಹೇಳಿದ್ದಾರೆಂದು ದೂರಲಾಗಿದೆ.
ತ್ರಿಶೂರ್ ದಯಾ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆÉ.
ಘಟನೆ ಗುರುವಾರ ನಡೆದಿದೆ. ಮಮ್ಮಿಯೂರು ಮೂಲದ ರೋಗಿಗೆ ಈ ಕೆಟ್ಟ ಅನುಭವವಾಗಿದೆ. ಅವರು ತೀವ್ರ ಕಾಲು ನೋವಿನಿಂದ ಚಿಕಿತ್ಸೆಗೆ ಆಗಮಿಸಿದ್ದರು. ನೋವು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದಾಗ ಸೂಚನೆಯಂತೆ ಮೊದಲು ಎಕ್ಸ್ ರೇ ತೆಗೆಸಿ ರಿಪೋರ್ಟ್ ಸಮೇತ ಹೋದಾಗ ಸರಿಪಡಿಸಲು ಸಾಧ್ಯವಿಲ್ಲ ಎಂದರು.
ನರಗಳ ಸಮಸ್ಯೆ ಇದೆಯೇ ಎಂದು ಕೇಳಿದಾಗ ಗೊತ್ತಿಲ್ಲ ಎಂದು ಉತ್ತರಿಸಿದರು. ಬೆಡ್ ರೆಸ್ಟ್ ಇಲ್ಲದೇ ಓಡಿ ನಡೆದಾಡಬೇಕು ಎಂದು ವೈದ್ಯರು ಉಡಾಫೆಯಿಂದ ಸಲಹೆ ನೀಡಿರುವುದಾಗಿ ದೂರಲಾಗಿದೆ. ಪತ್ನಿಯ ನೋವು ನೋಡಲಾಗದಿದ್ದರೆ ಬಾರ್ ಗೆ ಹೋಗಿ ಮದ್ಯ ಸೇವಿಸಿ ಎಂದು ಜೊತೆಗಿದ್ದ ಪತಿಗೆ ವೈದ್ಯರು ಹೇಳಿದ್ದಾರೆ. ಅದೇ ವಾಕ್ಯಗಳನ್ನು ಲೆಟರ್ ಪ್ಯಾಡ್‍ನಲ್ಲಿ ಬರೆದು ರೋಗಿಗೆ ನೀಡಲಾಗಿದೆ.
ಕಾಲು ನೋವಿನಿಂದ ಬಂದ ರೋಗಿಯ ಪತಿಗೆ ಬಾರ್‍ಗೆ ತೆರಳಿ ಮದ್ಯಪಾನ ಮಾಡಲು ಸಲಹೆ; ತ್ರಿಶೂರ್ ನಲ್ಲಿ ವಿಲಕ್ಷಣ ಘಟನೆ
0
ಅಕ್ಟೋಬರ್ 14, 2022
Tags