ನವದೆಹಲಿ: ಯೂನಿಕಾರ್ನ್ ಸ್ಟೆಲ್ ವ್ಯವಸ್ಥೆಯನ್ನು ಜಪಾನ್ ತಯಾರಿಸಿದ್ದು, ಭಾರತ ತನ್ನ ಯುದ್ಧನೌಕೆಗಳಲ್ಲಿ ಬಳಸಲು ನಿರ್ಧರಿಸಿದೆ. ಚೀನಾ ಯುದ್ಧನೌಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.
ಭಾರತ ಜಪಾನ್ನಿಂದ ಯುನಿಕಾರ್ನ್ ರಕ್ಷಣಾ ವ್ಯವಸ್ಥೆಯನ್ನು ಆಮದು ಮಾಡಲು ಮುಂದಾಗಿದೆ. ಇದು ನೋಡಲು ಒಂದು ಕೊಂಬಿನಂತೆ ಕಾಣುತ್ತದೆ. ಹೀಗಾಗಿ ಇದನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಇದು ಏನು ಮಾಡುತ್ತದೆ ಎಂದು ಕೇಳುತ್ತೀರಾ?
ಯುನಿಕಾರನ್ ರಕ್ಷಣಾ ವ್ಯವಸ್ಥೆ ನೌಕೆಯನ್ನು ಶತ್ರುಗಳ ರೆಡಾರ್ನಿಂದ ನಾಪತ್ತೆ ಮಾಡಿಬಿಡುತ್ತದೆ! ಶತ್ರುಗಳಿಗೆ ಮಿಸೈಲ್ ಅಪ್ಪಳಿಸುವ ತನಕ ನೌಕೆ ಯಾವ ದಿಕ್ಕಿನಲ್ಲಿದೆ ಎಂದು ಗೊತ್ತಾಗುವುದಿಲ್ಲ. ಇದರಿಂದ ಭಾರತದ ನೌಕೆ ತನ್ನ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಶತ್ರುಗಳ ಮೇಲೆ ದಾಳಿ ಮಾಡಲು ಇದು ಸಹಾಯ ಮಾಡುತ್ತದೆ.
ಇಂಡೋ ಫೆಸಿಫಿಕ್ ಹಾಗೂ ಅರೆಬಿಯನ್ ಸಮುದ್ರದಲ್ಲಿ ಭಾರತದ ಹೆಚ್ಚಿನ ಸರಕು ಸಾಗಟವಾಗುತ್ತದೆ. ಇಲ್ಲಿ ಚೀನಾ ಅನೇಕ ಬಂದರುಗಳನ್ನು ನಿರ್ಮಿಸಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಚೀನಾದಿಂದ ರಕ್ಷಣೆ ಪಡೆಯಲು ಯೂನಿಕಾರ್ನ್ ಸಹಾಯ ಮಾಡಲಿದೆ.