ಬದಿಯಡ್ಕ: ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶ, ಜೀವನವು ಜಗತ್ತಿಗೆಲ್ಲ ಮಾರ್ಗದರ್ಶಕವಾದುದು. ಅಹಿಂಸೆ,ಸತ್ಯ, ಸತ್ಯಾಗ್ರಹದ ಸಿದ್ಧಾಂತ ಈಗಲೂ ಪ್ರಸ್ತುತ. ನಾವೆಲ್ಲ ಅವರ ಬಾಳಿನ ದಾರಿ ಓದಿ ತಿಳಿದು ಅನುಸರಿಸಬೇಕು ಎಂದು ಪೆರಡಾಲ ಸರ್ಕಾರಿ ಪ್ರೌಢ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಕರೋಡಿ ಹೇಳಿದರು.
ಗಾಂಧೀ ಜಯಂತಿ ಅಂಗವಾಗಿ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಶಾಲಾ ಮುಖ್ಯೋಪಾಧ್ಯಾಯ ರಾಜಗೋಪಾಲ ಅವರು ಗಾಂಧೀಜಿಯವರ ಜೀವನ ವಿವರಿಸಿದರು. ಶ್ರೀಧರ ಭಟ್ ಶುಭಾಶಂಶನೆಗೈದರು. ಗೈಡ್ ಶಿಕ್ಷಕಿ ಚಂದ್ರಾವತಿ ಸ್ವಾಗತಿಸಿ, ಶಿಕ್ಷಕಿ ದಿವ್ಯ ಗಂಗಾ ವಂದಿಸಿದರು. ಪುμÁ್ಪರ್ಚನೆ, ಸರ್ವಧರ್ಮ ಪ್ರಾರ್ಥನೆ,ಪರಿಸರ ಶುಚೀಕರಣ ಕಾರ್ಯಕ್ರಮ ನಡೆಯಿತು. ಜಯಲತ, ರಾಜೇಶ್,ಬೀನಾ,ದುರ್ಗಾ,ರತೀಶ್, ಬಿನೋಯ್, ರಿಶಾದ್, ಫರ್ಝಾನಾ, ಲಲಿತಾಂಬಾ,ಬಾಲಕೃಷ್ಣ ಅವರು ನೇತೃತ್ವನೀಡಿದರು.