HEALTH TIPS

ವೈರಸ್ ಬಳಸಿ ಕ್ಯಾನ್ಸರ್ ಕಣಗಳ ಸಂಪೂರ್ಣ ನಾಶ! ಲಂಡನ್‌ನಲ್ಲಿ ನಡೆಸಿದ ಸಂಶೋಧನೆ

 ಕ್ಯಾನ್ಸರ್‌ ಗುಣಪಡಿಸುವ ಯಾವುದೇ ಸುದ್ದಿ ಕೇಳಿದರೂ ತುಂಬಾನೇ ಖುಷಿಯಾಗುತ್ತಿದೆ. ಕ್ಯಾನ್ಸರ್‌ ಎಂಬ ಮಹಾಮಾರಿಗೆ ಪ್ರತೀವರ್ಷ ಎಷ್ಟೋ ಜನರು ಬಲಿಯಾಗುತ್ತಿದ್ದಾರೆ. ಈ ಕ್ಯಾನ್ಸರ್‌ನಿಂದಾಗಿ ಎಷ್ಟೋ ಕುಟುಂಬಗಳ ನೆಮ್ಮದಿ ದೂರಾಗಿದೆ, ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ. ಮಧ್ಯಮವರ್ಗದವರಿಗೆ ಈ ಕಾಯಿಲೆ ಬಂದರಂತೂ ಚಿಕಿತ್ಸೆಗೆ ತುಂಬಾನೇ ಹಣ ಬೇಕಾಗಿರುವುದರಿಂದ ಆರ್ಥಿಕವಾಗಿ ಹೈರಾಣಾಗಿ ಬಿಡುತ್ತಾರೆ. ಈ ಕ್ಯಾನ್ಸರ್‌ ಮೊದಲ ಹಂತದಲ್ಲಿ ಪತ್ತೆಯಾದರೆ ಗುಣಪಡಿಸುವುದು ಸುಲಭ, ಆದರೆ ಮೂರನೇ, ನಾಲ್ಕನೇ ಹಂತದಲ್ಲಿ ಪತ್ತೆಯಾದರೆ ಗುಣಮುಖರಾಗುವುದು ಕಷ್ಟ.

ಆದರೆ ಇತ್ತೀಚಿನ ದಿನಗಳಲ್ಲಿ ವಿಜ್ಞಾನ ತುಂಬಾನೇ ಸಾಧನೆ ಮಾಡುತ್ತಿದೆ, ಇತ್ತೀಚೆಗೆ Dostarlimab ಡ್ರಗ್‌ನಿಂದ ಕ್ಯಾನ್ಸರ್‌ ರೋಗಿಗಳು ಗುಣಮುಖರಾಗಿರುವ ಸುದ್ದಿ ಪ್ರಕಟವಾಗಿತ್ತು. ಇದೀಗ ವೈರಸ್‌ನಿಂದ ವೈರಸ್‌ನಿಂದ ಕ್ಯಾನ್ಸರ್‌ ಕಣಗಳನ್ನು ಕೊಲ್ಲಬಹುದು, ಲಂಡನ್‌ನಲ್ಲಿ ಸಾಯುತ್ತಿರುವ ವ್ಯಕ್ತಿಯನ್ನು ವೈರಸ್‌ ಬಳಸಿ ಬದುಕಿಸಲಾಯಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕ್ಯಾನ್ಸರ್ ಕಣಗಳನ್ನು ಬಳಸಲು ಯಾವ ವೈರಸ್‌ ಬಳಸಲಾಯಿತು, ಈ ಕುರಿತು ವಿಜ್ಞಾನಿಗಳು ಏನು ಹೇಳಿದ್ದಾರೆ ನೋಡಿ:

ವೈರಸ್‌ ಬಳಿ ಕ್ಯಾನ್ಸರ್‌ ಕಣಗಳ ನಾಶ

ಲಂಡನ್‌ನ ವಿಜ್ಞಾನಿಗಳು ಸಾಯುವ ಹಂತದಲ್ಲಿದ್ದ ವ್ಯಕ್ತಿಯನ್ನು ವೈರಸ್‌ ಚಿಕಿತ್ಸೆ ನೀಡಿ ಬದುಕಿಸಿದರು. ಕೆಲವರಲ್ಲಿ ಈ ಚಿಕಿತ್ಸೆಯಿಂದಾಗಿ ಗಡ್ಡೆಗಳು ಕ್ಯಾನ್ಸರ್‌ ಗಡ್ಡೆಗಳು ಒಣಗಿದೆವು ಎಂದು ವಿಜ್ಞಾನಿಗಳು ಹೇಳಿದ್ದಾರೆ. ವರದಿಯ ಪ್ರಕಾರ ಈ ಔಷಧಿಯನ್ನು ದುರ್ಬಲ ಹರ್ಪೀಸ್ ವೈರಸ್‌ನಿಂದ ತಯಾರಿಸಿದ್ದು ಇವುಗಳು ಕ್ಯಾನ್ಸರ್‌ ಕಣಗಳನ್ನು ನಾಶ ಪಡಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವರದಿ ಏನು ಹೇಳಿದೆ?

ಲಂಡನ್‌ನ ವ್ಯಕ್ತಿಯಲ್ಲಿ ಲಾಲಾರಸ ಗ್ರಂಥಿಯಲ್ಲಿ ಕ್ಯಾನ್ಸರ್‌ ಪತ್ತೆಯಾಯಿತು. ಆ ವ್ಯಕ್ತಿ ತುಂಬಾ ಚಿಕಿತ್ಸೆಯನ್ನು ಪಡೆದರು, ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಯಿತು, ಆದರೆ ಯಾವುದೇ ಚಿಕಿತ್ಸೆ ಪರಿಣಾಮ ಬೀರಲಿಲ್ಲ. ಆದರೆ ಈ ಕ್ಯಾನ್ಸರ್‌ನಿಂದ ಗುಣಮುಖರಾಗಲು ತುಂಬಾನೇ ಬಯಸುತ್ತಿದ್ದರು, ಹಾಗಾಗಿ ಕ್ಲಿನಿಕಲ್ ಟ್ರಯಲ್‌ಗೆ ಒಪ್ಪಿದರು, ಆದರೆ ಈಗ ಆ ವ್ಯಕ್ತಿ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿ ಎರಡು ವರ್ಷಗಳಾಯಿತು.

ಎರಡು ರೀತಿಯಲ್ಲಿ ಸಹಾಯವಾಗುವ ಚಿಕಿತ್ಸೆ

ವರದಿಯ ಪ್ರಕಾರ ಈ ವೈರಸ್‌ ಡ್ರಗ್‌ ಅನ್ನು ನೇರವಾಗಿ ಗಡ್ಡೆಗೆ ಚುಚ್ಚಲಾಗುವುದು, ಆಗ ಕ್ಯಾನ್ಸರ್‌ ಕಣಗಳು ಅಲ್ಲಿಯೇ ಹೆಚ್ಚಾಗಿ ಒಡೆಯಲಾರಂಭಿಸುತ್ತೆ, ಇದರಿಂದಾಗಿ ಮುಂದೆ ಪ್ರೊಟೀನ್‌ ಹೆಚ್ಚಾಗುವುದನ್ನು ಬ್ಲಾಕ್‌ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಕ್ಯಾನ್ಸರ್‌ಗಳನ್ನು ಒಡೆದು ಹಾಕಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸವನ್ನು ಈ ಚುಚ್ಚು ಮದ್ದು ಮಾಡುತ್ತದೆ.

9ರಲ್ಲಿ ಮೂರು ಜನರಲ್ಲಿ ಕ್ಯಾನ್ಸರ್‌ ಗಡ್ಡೆಗಳು ಕಿರಿದಾಗಿತ್ತು

ವರದಿ ಪ್ರಕಾರ 40 ಕ್ಯಾನ್ಸರ್ ರೋಗಿಗಳು ಮೊದಲ ಪ್ರಯೋಗದಲ್ಲಿ ಭಾಗವಹಿಸಿದ್ದರು. ಅವರಿಗೆ RP2 ಇಂಜೆಕ್ಷನ್‌ ನೀಡಲಾಗಿತ್ತು. ಅವರಲ್ಲಿ 9ರಲ್ಲಿ 3 ಜನರ ಗಡ್ಡೆಗಳು ಕಿರಿದಾಗಿ ಒಣಗಲಾರಂಭಿಸಿತ್ತು. ಮೂವತ್ತರಲ್ಲಿ ಏಳು ಜನರು ಚೇತರಿಸಿಕೊಳ್ಳಲಾರಂಭಿಸಿದರು. ಈ ಔಷಧಿಯ ಅಡ್ಡಪರಿಣಾಮ ಕೂಡ ಅಷ್ಟೇನೂ ಇಲ್ಲ.

ಈ ಹರ್ಪೀಸ್‌ ವೈರಸ್‌ ಬಳಸಿ ಕ್ಯಾನ್ಸರ್‌ ಚಿಕಿತ್ಸೆ ನೀಡಿದಾಗ ರೋಗಿಗಳು ಗುಣಮುಖರಾಗುತ್ತಿರುವುದು ಕ್ಯಾನ್ಸರ್ ಮಹಾಮಾರಿಯಿಂದ ಪಾರಾಗಲು ಹೊಸ ಭರವಸೆ ಮೂಡಿಸಿದೆ.


 

 

 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries