ಉಪ್ಪಳ/ಮಂಜೇಶ್ವರ: ಪ್ರವಾದಿ ಮುಹಮ್ಮದ್ ಪೈಗಂಬರ್(ಸ.ಅ) ಅವರ ಜನ್ಮದಿನ " ಮಿಲಾದುನ್ನಬಿ " ಆಚರಣೆಯು ಭಾನುವಾರ ಮಂಜೇಶ್ವರ ತಾಲೂಕಿನಾದ್ಯಂತ ಸಂಭ್ರಮದಲ್ಲಿ ನಡೆಯಿತು.
ಕೇರಳದಲ್ಲೇ ಅತಿ ಹೆಚ್ಚು ಉರ್ದು ಮಾತೃ ಭಾμÉಯನ್ನಾಡುವ ಉಪ್ಪಳದಲ್ಲಿರುವ ಹನಫಿ ಸಮುದಾಯದ ಮುಸಲ್ಮಾನರಿಂದ ಅಹ್ಲೇ ಸುನ್ನತ್ ಹನಫಿ ಜಾಮಿಯಾ ಮಸೀದಿ ನೇತೃತ್ವದಲ್ಲಿ ನಡೆದ ಜಶ್ವೇ ಈದ್ ಮಿಲಾದ್ ರಾಲಿ ವಿಶೇಷ ಗಮನ ಸೆಳೆಯಿತು. ಇಲ್ಲಿಯ ಮದ್ರಸ ವಿದ್ಯಾರ್ಥಿಗಳಿಂದ ಪ್ರವಾದಿ ಗುಣಗಾನದ ಹಾಡುಗಳು, ದಫ್ ನೊಂದಿಗೆ ಮಿಲಾದ್ ರಾಲಿ ನಡೆಯಿತು. ಅರಬ್ ದೇಶದ ಉಡುಗೆತೊಡುಗೆಗಳನ್ನು ಧರಿಸಿದ್ದ ಯುವಕರು ಪ್ರವಾದಿ ಕೀರ್ತನೆಯನ್ನು ಹಾಡಿ ಹನಫಿ ಬಜಾರಿನಿಂದ ಉಪ್ಪಳ ನಗರದ ತನಕ ಶಿಸ್ತಿನಿಂದ ರಾಲಿ ನಡೆಸಿ ಜನಮೆಚ್ಚುಗೆಗೆ ಪಾತ್ರರಾದರು. ಬಳಿಕ ಮಕ್ಕಳಿಗೆ ಹಾಡು, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಮಾಅತ್ ಅಧ್ಯಕ್ಷ ಹಾಜಿ ಬಶೀರ್ ಆಹ್ಮದ್, ಉಪಾಧ್ಯಕ್ಷ ಅಬ್ದುಲ್ ರಶೀದ್, ಕಾರ್ಯದರ್ಶಿ ಸಯ್ಯದ್ ರಫಿಕ್, ತಹರೀಕೆ ಉರ್ದು ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜೀಮ್ ಮಣಿಮುಂಡ, ಮಕ್ಬೂಲ್ ಆಹ್ಮದ್ ಮೊದಲಾದವರು ನೇತೃತ್ವ ನೀಡಿದರು.
ಕುಂಜತ್ತೂರು ಜಮಾಅತ್, ಉದ್ಯಾವರ ಸಾವಿರ ಜಮಾಅತ್, ಪೆÇಸೋಟು ಜಮಾಅತ್, ಪಾಂಡ್ಯಾಲ್ ಜಮಾಅತ್ ಹಾಗೂ ಮತ್ತಿತರ ಜಮಾಅತ್ ಗಳ ಮದ್ರಸ ಮಸೀದಿಗಳಲ್ಲಿ ನಡೆದ ಸಭಾ ಕಾರ್ಯಕ್ರಮಗಳಿಗೆ ಪ್ರವಾದಿ ಜೀವನದ ಸಂದೇಶವನ್ನು ನೀಡಲಾಯಿತು. ರಾಲಿಗಳಲ್ಲಿ ಮಕ್ಕಳಿಗೆ ಹಸಿರು ಲಡ್ಡುಗಳ ಜೊತೆಗೆ ಸಿಹಿ ತಿಂಡಿ ಹಂಚಿ ಪಾನೀಯಗಳನ್ನು ವಿತರಿಸಲಾಯಿತು. ಮಿಲಾದ್ ರಾಲಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಿರಿಯರು ಕೂಡಾ ಭಾಗಿಯಾಗಿ ಮಿಲಾದುನ್ನಭಿಯ ಸಂಭ್ರ ಹಾಗೂ ಸಡಗರಕ್ಕೆ ಸಾಕ್ಷಿಯಾದರು.