ಕಾಸರಗೋಡು: ಅಂಗನವಾಡಿ ನೌಕರರು ಜಿಲ್ಲಾಧಿಕಾರಿ ಕಚೇರಿ ಮೆರವಣಿಗೆ ನಡೆಸಿದರು
ವಿವಿಧ ಬೇಡಿಕೆ ಮುಂದಿರಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ (ಸಿಐಟಿಯು) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗೌರವಧನ ಹೆಚ್ಚಿಸಬೇಕು, ಗುಣಮಟ್ಟದ ಉಪಕರಣಗಳನ್ನು ಒದಗಿಸಬೇಕು, ಎಲ್ಲರಿಗೂ ಪೆÇ್ರೀತ್ಸಾಹಧನ ನೀಡಬೇಕು, ಅಂಗನವಾಡಿಗಳ ಮೂಲಕವೇ ಶಾಲಾಪೂರ್ವ ಶಿಕ್ಷಣವನ್ನು ಜಾರಿಗೊಳಿಸಬೇಕು, ಬಾಡಿಗೆ ಕಟ್ಟಡಗಳ ಬಾಡಿಗೆ ಸಕಾಲಕ್ಕೆ ಪಾವತಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾನಗರ ಸರ್ಕಾರಿ ಕಾಲೇಜು ಆವರಣದಿಂದ ಆರಂಭವಾದ ಮೆರವಣಿಗೆಯಲ್ಲಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಅಬ್ರಹಾಂ ಧರಣಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷೆ ಪಿ.ಟಿ.ವನಜಾ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಗಿರಿ ಕೃಷ್ಣನ್, ಪಿ.ವಸಂತಕುಮಾರಿ, ಕೆ.ಕೆ.ಪದ್ಮಾಕ್ಷಿ, ಪಿ.ವಿ.ರಾಧಾಮಣಿ, ಪಿ.ಪದ್ಮಿನಿ, ಕೆ.ವಿ.ಭಾರ್ಗವಿ, ಬಿ.ಸರೋಜಮ್ಮ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ.ರಾಧಾಮಣಿ ಸ್ವಾಗತಿಸಿದರು.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ (ಸಿಐಟಿಯು)ದಿಂದ ಡಿಸಿ ಕಚೇರಿ ಎದುರು ಧರಣಿ
0
ಅಕ್ಟೋಬರ್ 19, 2022