ತಿರುವನಂತಪುರ: ಪಾರಶಾಲಾ ನಿವಾಸಿ ಶರೋನ್ ರಾಜ್ ನನ್ನು ಹತ್ಯೆಗೈಯ್ಯಲು ದ್ವೇಷವೇ ಕಾರಣ ಎಂದು ಆರೋಪಿ ಗ್ರೀಷ್ಮಾ ಹೇಳಿಕೆ ನೀಡಿದ್ದಾಳೆ.
ಶರೋನ್ ತನ್ನ ವೈಯಕ್ತಿಕ ಚಿತ್ರಗಳ ತುಣುಕನ್ನು ಹೊಂದಿದ್ದ. ಅದನ್ನು ಹಿಂತಿರುಗಿಸುವಂತೆ ಕೇಳಿಕೊಂಡರೂ ನಿರಾಕರಿಸಿದ್ದ. ಬಳಿಕ ಹತ್ಯೆಗೈದಿರುವುದಾಗಿಯೂ ಗ್ರೀಷ್ಮಾ ಪೋಲೀಸರಿಗೆ ತಿಳಿಸಿದ್ದಾಳೆ.
ಗ್ರೀಷ್ಮಾಳ ಚಿತ್ರಗಳು ಮತ್ತು ವೀಡಿಯೊಗಳನ್ನು ತನಗೆ ಹಿಂತಿರುಗಿಸಬೇಕೆಂದು ಒತ್ತಾಯಿಸಿದ್ದಳು. ಆದರೆ ಕೊಡುವುದಿಲ್ಲ ಎಂದು ಶರೋನ್ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಗ್ರೀಷ್ಮಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಆದರೂ ಶರೋನ್ ಕೊಡಲೊಪ್ಪಲಿಲ್ಲ. ಈ ಚಿತ್ರಗಳನ್ನು ತನ್ನ ಭಾವಿ ಪತಿಗೆ ಹಸ್ತಾಂತರಿಸುವ ಭಯವಿತ್ತು ಎಂದು ಗ್ರೀಷ್ಮಾ ಪೋಲೀಸರಿಗೆ ತಿಳಿಸಿದ್ದಾಳೆ.
ಇದೇ ವೇಳೆ, ಗ್ರೀಷ್ಮಾ ಕೊಲೆಯನ್ನು ಮರೆಮಾಚಲು ಪ್ರಯತ್ನಿಸಿದಳು. ಘಟನೆ ಬಳಿಕ ಕೀಟನಾಶಕ ಬಾಟಲಿಯನ್ನು ಜಮೀನಿನಲ್ಲಿಯೇ ಬಿಟ್ಟು ಹೋಗಿದ್ದಳು. ಇದರ ಜೊತೆಗೆ, ನಡವಳಿಕೆಯ ಬಗ್ಗೆಯೂ ಗಮನ ಹರಿಸಲಾಯಿತು. ಪೋಲೀಸರಿಂದ ತಪ್ಪಿಸಿಕೊಳ್ಳಲು ಆಕೆ ಕೈಲಾದಷ್ಟು ಪ್ರಯತ್ನಿಸಿದಳು. ಪೋಲೀಸರ ವಿಚಾರಣೆಯನ್ನು ನಿಭಾಯಿಸಲು ಗೂಗಲ್‍ನಲ್ಲಿ ಹುಡುಕಲಾಗಿತ್ತು ಎಂದು ಗ್ರೀಷ್ಮಾ ಪೋಲೀಸರಿಗೆ ತಿಳಿಸಿದ್ದಾಳೆ.
ವೈಯಕ್ತಿಕ ಪೋಟೋ ಮತ್ತು ವೀಡಿಯೊಗಳನ್ನು ಹಿಂತಿರುಗಿಸದ ಕೋಪ ಕೊಲೆಗೆ ಕಾರಣ: ಶರೋನ್ ಹತ್ಯೆಯ ಬಗ್ಗೆ ಬಾಯ್ಬಿಟ್ಟ ಗ್ರೀಷ್ಮಾ
0
ಅಕ್ಟೋಬರ್ 31, 2022