ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶರನ್ನವರಾತ್ರಿಯು ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸೋಮವಾರ ಬೆಳಿಗ್ಗೆ ಗಣಹೋಮದೊಂದಿಗೆ ಆರಂಭವಾಗಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬುಧವಾರದವರೆಗೆ ನಡೆಯಿತು.
ವಿಜಯದಶಮಿಯಂದು ಪ್ರಾತ:ಕಾಲ 5. ಕ್ಕೆ ಬ್ರಹ್ಮಶ್ರೀ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ಶ್ರೀ ಗಾಯತ್ರೀ ಮಾತೆಗೆ “ಸೀಯಾಳಾಭಿಷೇಕ”ನಡೆಯಿತು. ಬೆಳಗ್ಗಿನ ಪೂಜೆಯ ನಂತರ ಶ್ರೀಗಳವರು ತೆನೆಪೂಜೆ ನಡೆಸಿದರು. ಬಳಿಕ ಚಿಣ್ಣರಿಗೆ ಪೂಜ್ಯರು ವಿದ್ಯಾರಂಭ ನಡೆಸಿದರು. ಪೂರ್ವಾಹ್ನ 10.30ರಿಂದ ಕೊಂಡೆವೂರಿನ ಕು.ಗಾಯತ್ರಿಯ ಶಿಷ್ಯರಿಂದ ಹಾಡುಗಾರಿಕೆ, ಪಿಟೀಲು ವಾದನ ನಂತರ ಕು.ಗಾಯತ್ರಿ, ಕು.ಶ್ರಾವಣ್ಯ ಮತ್ತು ಕು.ಮೋಕ್ಷಪ್ರಭ ರಿಂದ ಸಂಗೀತ ಸೇವೆ ನಡೆಯಿತು.
. ಮಧ್ಯಾಹ್ನ ಮಹಾಪೂಜೆಯ ನಂತರ ಶಾರದಾ ವಿಗ್ರಹದ ಭವ್ಯಮೆರವಣಿಗೆಯು ಭಕ್ತ ಜನರ ಪಾಲ್ಗೊಳ್ಳುವಿಕೆಯಲ್ಲಿ ಸಾಗಿ, “ಶಾರದಾ ವಿಸರ್ಜನೆ”ಯು ಶ್ರೀಮಠದ ನಕ್ಷತ್ರವನದ ಆನಂದತೀರ್ಥ ಪುಷ್ಕರಿಣಿಯಲ್ಲಿ ಪೂಜ್ಯ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.