ಕುಂಬಳೆ: ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿರುದ್ಧದ ಅಪಪ್ರಚಾರವನ್ನು ಕೊನೆಗೊಳಿಸಬೇಕು ಎಂದು ಶಾಲಾ ರಕ್ಷಕ-ಶಿಕ್ಷಕ ಸಂಘದ(ಪಿಟಿಎ) ಪದಾಧಿಕಾರಿಗಳು ವಿನಂತಿಸಿದ್ದಾರೆ.
ಶಾಲೆಯ ಓರ್ವ ವಿದ್ಯಾರ್ಥಿಯನ್ನು ಕೆಲವರು ರಸ್ತೆಯಲ್ಲಿ ಥಳಿಸಿದ ವಿಡಿಯೋ ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಇದು ಶಾಲೆಯ ಹಳೆ ವಿದ್ಯಾರ್ಥಿಯ ನೇತೃತ್ವದ ತಂಡವೆಂದು ಸ್ಪಷ್ಟವಾಗಿದ್ದು, ಇದರ ವಿರುದ್ಧ ಪಿಟಿಎ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ವಿಷಯದಲಲಿ ಶಾಲೆ ಹಾಗೂ ವಿದ್ಯಾರ್ಥಿಗಳ ವಿರುದ್ದ ಸುಳ್ಳುಸುದ್ದಿಗಳನ್ನು ಹಬ್ಬಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಮಾನಹಾನಿಯುಂಟಾಗುತ್ತಿದೆಯೆಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ಕುಂಬಳೆ ಶಾಲೆಯ ವಿದ್ಯಾರ್ಥಿಗಳ ಮೇಲೆ ಎಲ್ಲೋ ನಡೆದ ಘಟನೆಗಳನ್ನು ಬಿತ್ತರಿಸಲಾಗುತ್ತಿದೆ ಎಂದು ಪದಾಧಿಕಾರಿಗಳು ಆರೋಪಿಸಿದರು.
ಗೌರವಾನ್ವಿತ ಪೋಷಕರು ಮತ್ತು ಹಿತಚಿಂತಕ ಸ್ಥಳೀಯರು ಇಂತಹ ಹೇಯ ಚಟುವಟಿಕೆಗಳನ್ನು ತಿರಸ್ಕರಿಸಿ ಶಾಲೆಯ ಸುಗಮ ನಿರ್ವಹಣೆಯಲ್ಲಿ ಅವರೊಂದಿಗೆ ಇರಬೇಕೆಂದು ಪಿಟಿಎ ಮನವಿ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಅಹ್ಮದಲಿ ಕುಂಬಳೆ, ಉಪಾಧ್ಯಕ್ಷ ಯೂಸುಫ್ ಉಳುವಾರ್, ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್, ಪ್ರಾಂಶುಪಾಲ ದಿವಾಕರನ್, ಮುಖ್ಯೋಪಾಧ್ಯಾಯ ಕೃಷ್ಣಮೂರ್ತಿ, ತಾ.ಪಂ.ಕಾರ್ಯದರ್ಶಿ ರವಿ ಮಾಸ್ತರ್ ಉಪಸ್ಥಿತರಿದ್ದರು.
ಕುಂಬಳೆ ಹೈಯರ್ ಸೆಕೆಂಡರಿ ವಿರುದ್ಧದ ಅಪಪ್ರಚಾರ ಕೊನೆಗೊಳಿಸಬೇಕು: ಪಿ.ಟಿ.ಎ
0
ಅಕ್ಟೋಬರ್ 21, 2022
Tags