ಕುಂಬಳೆ: ಜಿಲ್ಲೆಯಲ್ಲಿ ಅತ್ಯುತ್ತಮ ಆರೋಗ್ಯ ಚಿಕಿತ್ಸಾ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಬೇಕು, ಜಿಲ್ಲೆಗೆ ಮಂಜೂರಾದ ಏಮ್ಸ್ ಆಸ್ಪತ್ರೆಯನ್ನು ಜಿಲ್ಲೆಯಲ್ಲೇ ಉಳಿಸಬೇಕೆಂದು ಒತ್ತಾಯಿಸಿ ಖ್ಯಾತ ಕಾರುಣ್ಯ ಹೋರಾಟಗಾರ್ತಿ ದಯಾಭಾಯಿ ಅಮ್ಮ ಅವರು ಸೆಕ್ರೆಟರಿಯೇಟ್ ಎದುರು ಅನಿರ್ದಿμÁ್ಟವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ತಾಯಿಯ ಜೀವ ಉಳಿಸುವಂತೆ ಒತ್ತಾಯಿಸಿ ಕುಂಬಳೆ ನಗರದಲ್ಲಿ ಜ್ಯೋತಿ ಬೆಳಗಿಸಿ ಪ್ರತಿಭಟನೆ ನಡೆಸಲಾಯಿತು.
ದಯಾಭಾಯಿ ಅಮ್ಮನವರ ಅನಿರ್ದಿμÁ್ಟವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಕಾಸರಗೋಡು ಜಿಲ್ಲೆಯ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮೊಗ್ರಾಲ್ ರಾಷ್ಟ್ರೀಯ ವೇದಿಕೆ ಪ್ರತಿನಿಧಿ ಎಂ.ಎ.ಮೂಸಾ ಧರಣಿಯನ್ನು ಉದ್ಘಾಟಿಸಿದರು. ಸಂಘಟನಾ ಸಮಿತಿ ಉಪಾಧ್ಯಕ್ಷ ಜುಬೇರ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಶಾಫಿ ಕಲ್ಲುವಳಪ್, ಹಮೀದ್ ಚೇರಂಗೈ, ಅಬ್ದುಲ್ಲತೀಫ್ ಕುಂಬಳೆ, ಸತ್ತಾರ್ ಚೌಕಿ, ಅಶ್ರಫ್ ಧರ್ಮತ್ತಡ್ಕ, ಬಿಲಾಲ್ ಬದ್ರಿಯಾನಗರ, ಅಸ್ಲಂ ಸೂರಂಬೈಲು, ಅಬ್ದುಲ್ ರಜಾಕ್ ಚೌಕಿ, ರಜಾನಾ ಮೊಗ್ರಾಲ್ ಮತ್ತಿತರರು ಭಾಗವಹಿಸಿದ್ದರು. ಖದೀಜಾ ಮೊಗ್ರಾಲ್ ಸ್ವಾಗತಿಸಿ, ವಂದಿಸಿದರು.
ದಯಾಭಾಯಿ ತಾಯಿಯ ಜೀವ ಉಳಿಸಿ; ಕುಂಬಳೆಯಲ್ಲಿ ಜ್ಯೋತಿ ಬೆಳಗಿಸಿ ಪ್ರತಿಭಟನೆ ದಯಾಭಾಯಿ ತಾಯಿಯ ಜೀವ ಉಳಿಸಿ; ಕುಂಬಳೆಯಲ್ಲಿ ಜ್ಯೋತಿ ಬೆಳಗಿಸಿ ಪ್ರತಿಭಟನೆ
0
ಅಕ್ಟೋಬರ್ 08, 2022
Tags