ನವದೆಹಲಿ: ಎಲ್ಲಾ ರಾಜ್ಯಗಳ ಗೃಹಮಂತ್ರಿಗಳು ಭಾಗಿಯಾಗಿದ್ದ ಚಿಂತನಾ ಶಿಬಿರ ಎಂಬ ಆನ್ಲೈನ್ ಸಂವಾದ ಕಾರ್ಯಕ್ರಮ ಶುಕ್ರವಾರ (ಅ.28) ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ 'ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಈ ಕಾರ್ಯಕ್ರಮ ಒಳ್ಳೆಯ ಉದಾಹರಣೆ' ಎಂದು ಹೇಳಿದರು.
ಪ್ರಧಾನಿ ಮೋದಿ, ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 'ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಒಬ್ಬರಿಂದ ಇನ್ನೊಬ್ಬರು ಪ್ರೇರಣೆ ಪಡೆದು ಮುಂದೆ ಸಾಗಬೇಕು. ಎಲ್ಲರೂ ದೇಶದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು. ಒಬ್ಬರಿಂದ ಇನ್ನೊಬ್ಬರು ಹೊಸ ವಿಷಯಗಳನ್ನು ಕಲಿಯಬೇಕು.' ಎಂದು ಸಲಹೆ ನೀಡಿದರು.
'ಸಂವಿಧಾನದ ಪ್ರಕಾರ ಕಾನೂನು ಸುವ್ಯವಸ್ಥೆ ಆಯಾ ರಾಜ್ಯಗಳಿಗೆ ಸಂಬಂಧಪಟ್ಟ ವಿಷಯ. ಆದರೂ ಅದು ದೇಶದ ಏಕತೆ ಮತ್ತು ಸಮಗ್ರತೆಗೆ ಸಂಬಂಧಪಟ್ಟ ವಿಷಯ' ಎಂದು ಸಮಾರೋಪ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು.