ಕಾಸರಗೋಡು: ಪೆÇೀಕ್ಸೋ ಪ್ರಕರಣಗಳ ಅತಿಶೀಘ್ರ ವಿಚಾರಣೆಗಾಗಿ ಕಾಸರಗೋಡಿನಲ್ಲಿ ನೂತನ ತ್ವರಿತಗತಿ ವಿಶೇಷ ನ್ಯಾಯಾಲಯದ ಉದ್ಘಾಟನೆ ಹಾಗೂ ಹೊಸದುರ್ಗ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಹಸ್ತಾಂತರ ಕಾರ್ಯಕ್ರಮ ಅ. 22ರಂದು ನಡೆಯಲಿದೆ ಎಂದು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಕೃಷ್ಣಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿದ್ಯಾನಗರದಲ್ಲಿರುವ ಕುಟುಂಬ ನ್ಯಾಯಾಲಯದ ಕಟ್ಟಡದ ಮೇಲಿನ ಮಹಡಿಯಲ್ಲಿ ನ್ಯಾಯಾಲಯ ಕಾರ್ಯನಿರ್ವಹಿಸಲಿದೆ. ಮಧ್ಯಾಹ್ನ 3ಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನೂತನ ನ್ಯಾಯಾಲಯ ಉದ್ಘಾಟಿಸುವರು.
ರಾಜ್ಯದಲ್ಲಿ ಮಂಜೂರಾದ 28 ನ್ಯಾಯಾಲಯಗಳಲ್ಲಿ ಕಾಸರಗೋಡು ಕೂಡ ಒಂದಾಗಿದೆ. ಪೋಕ್ಸೋ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ಉಳಿದ ಪ್ರಕರಣಗಳು ಐವತ್ತಕ್ಕಿಂತ ಕಡಿಮೆ ಇರಬೇಕು ಎಂದು ಸೂಚಿಸಲಾಗಿದ್ದರೂ, ಕಾಸರಗೋಡು ನ್ಯಾಯಾಲಯದಲ್ಲಿ 300 ಹಾಗೂ ಹೊಸದುರ್ಗ ನ್ಯಾಯಾಲಯದಲ್ಲಿ 150 ಪ್ರಕರಣಗಳು ದಾಖಲಾಗಿದೆ. ತೀರ್ಪು ನೀಡಲು ಇನ್ನೂ ಹಲವು ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಪೆÇೀಕ್ಸೋ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಮೂರನೇ ಪೆÇೀಕ್ಸೊ ನ್ಯಾಯಾಲಯ ಆರಂಭಗೊಳ್ಳುತ್ತಿದ್ದು, ಇಲ್ಲಿ ಕಾರ್ಯನಿರ್ವಹಿಸಲು ನ್ಯಾಯಾಧೀಶರು ಮತ್ತು ಸಿಬ್ಬಂದಿಯನ್ನೂ ನೇಮಿಸಲಾಗಿದೆ. ಶೀಘ್ರದಲ್ಲೇ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕವೂ ನಡೆಯಲಿದೆ. ಸಂತ್ರಸ್ತ ಮಕ್ಕಳ ಮಾನಸಿಕ ಸ್ಥಿತಿಗೆ ಅನುಗುಣವಾಗಿ ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನು ಸಜ್ಜುಗೊಳಿಸಲಾಗುತ್ತಿದೆ. ವಿಶೇಷವಾಗಿ ಮಕ್ಕಳಿಗಾಗಿ ನ್ಯಾಯಾಲಯದಲ್ಲಿ ಪ್ರತ್ಯೇಕ ಕಟಕಟೆಯನ್ನೂ ನಿರ್ಮಿಸಲಾಗುತ್ತಿದೆ. ಈ ಮಕ್ಕಳನ್ನು ಆರೋಪಿಗಳಾಗಲಿ, ಸಾರ್ವಜನಿಕರಾಗಲಿ ಹೊರಗಿನಿಂದ ನೋಡಲು ಸಾಧ್ಯವಿಲ್ಲ. ನ್ಯಾಯಾಧೀಶರು ಮತ್ತು ಸಂತ್ರಸ್ತರಿಗೆ ಪ್ರತ್ಯೇಕ ಪ್ರವೇಶ ಕೇಂದ್ರವಿರುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಸರಗೋಡು ವಕೀಲರ ಸಂಘದ ಅಧ್ಯಕ್ಷ ಎಂ.ನಾರಾಯಣ ಭಟ್, ಕಾರ್ಯದರ್ಶಿ ಪ್ರದೀಪ್ ರಾವ್ ಉಪಸ್ಥಿತರಿದ್ದರು.
ಪೋಕ್ಸೋ ಪ್ರಕರಣಗಳ ತ್ವರಿತ ವಿಚಾರಣೆ: ಇಂದು ವಿಶೇಷ ನ್ಯಾಯಾಲಯ ಉದ್ಘಾಟನೆ
0
ಅಕ್ಟೋಬರ್ 21, 2022
Tags