ಮಂಜೇಶ್ವರ: ಕುಂಜತ್ತೂರು ಜಿ.ವಿ.ಎಚ್.ಎಸ್.ಎಸ್. ಶಾಲೆಯ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯÀ ಬಾಲಕೃಷ್ಣ. ಜಿ. ಅಧ್ಯಕ್ಷತೆ ವಹಿಸಿ, ಧ್ವಜಾರೋಹಣ ಗೈಯುವುದರ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆಯನ್ನು ನೀಡಿದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಯೋಗಿಶ್ ಕ್ರೀಡಾಕೂಟವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
ಶಾಲಾ ಎಸ್.ಎಂ.ಸಿ ಸದಸ್ಯ ಈಶ್ವರ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಕೆ.ಎಚ್.ಮೊಹಮ್ಮದ್, ವಿ.ಎಚ್.ಎಸ್.ಸಿ.ವಿಭಾಗದ ಪ್ರಾಚಾರ್ಯ ಶಿಶುಪಾಲ,ಹಿರಿಯ ಶಿಕ್ಷಕಿ
ಸುಚೇತಾ, ನೌಕರ ಸಂಘದ ಕಾರ್ಯದರ್ಶಿ ಅಮಿತಾ ಶುಭಾಶಂಸನೆಗೈದರು.ಶಾಲಾ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ಶಿಕ್ಷಕಿ ಅನಿತಾ ಸ್ವಾಗತಿಸಿ,ಶಿಕ್ಷಕ ರವೀಂದ್ರ ರೈ ವಂದಿಸಿದರು.ಶಿಕ್ಷಕ ದಿವಾಕರ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.
ಕುಂಜತ್ತೂರು ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ
0
ಅಕ್ಟೋಬರ್ 04, 2022
Tags