ಕಾಸರಗೋಡು: ಮಂಜೇಶ್ವರದಿಂದ ಮೂರು ಬಾರಿ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದ, ಕನ್ನಡದ ಕಟ್ಟಾಳು, ಪ್ರಸಿದ್ಧ ವಕೀಲ ಕಳ್ಳಿಗೆ ಮಹಾಬಲ ಭಂಡಾರಿ ಅವರ ಹೆಸರನ್ನು ಮಂಜೇಶರದಲ್ಲಿ ಆರಂಭಗೊಳ್ಳಲಿರುವ ಕಾನೂನು ಕಾಲೇಜಿಗೆ ಇರಿಸುವಂತೆ ಒತ್ತಾಯ ಕೇಳಿಬರಲಾರಂಭಿಸಿದೆ.
ಕಾಸರಗೋಡು, ಮಂಜೇಶ್ವರ ಪ್ರದೇಶದ ತುಳು, ಕನ್ನಡ, ಮಲಯಾಳ, ಬ್ಯಾರಿ, ಕೊಂಕಣಿ ಸೇರಿದಂತೆ ಸಮಸ್ತ ಜನರ ಹಿತರಕ್ಷಣೆಗಾಗಿ ದುಡಿದಿರುವ ಅಗ್ರಗಣ್ಯರಲ್ಲಿ ಕಳ್ಳಿಗೆ ಮಹಾಬಲ ಭಂಡಾರಿ ಒಬ್ಬರಾಗಿದ್ದು, ಇವರ ಹೆಸರನ್ನು ಕಾಲೇಜಿಗೆ ಇರಿಸುವುದು ಔಚಿತ್ಯಪೂರ್ಣವಾಗಿದೆ. ಮಹಾಜನ ಆಯೋಗದ ಮುಂದೆ ಪ್ರಬಲ ಸಾಕ್ಷ್ಯಾಧಾರಗಳನ್ನು ಒದಗಿಸಿಕೊಡುವ ಮೂಲಕ ಮುಂಚೂಣಿ ನಾಯಕರಾಗಿ ಖ್ಯತಿ ಗಳಿಸಿದ್ದರು. ಇವರ ಹೆಸರನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಮಂಜೇಶ್ವರದಲ್ಲಿ ಆರಂಭಗೊಳ್ಳಳಿರುವ ಕಾನೂನು ಕಾಲೇಜಿಗೆ ಮಾಜಿ ಶಾಸಕ, ವಕೀಲ ಕಳ್ಳಿಗೆ ಮಹಾಬಲ ಭಂಡಾರಿ ಅವರ ಹೆಸನ್ನಿರಿಸುವಂತೆ ಕಳ್ಳಿಗೆ ಮಹಾಬಲ ಭಂಡಾರಿ ಅವರ ಅಭಿಮಾನಿಗಳೂ ಆಗ್ರಹಿಸಿದ್ದಾರೆ.
ಮಂಜೇಶ್ವರ ಕಾನೂನು ಕಾಲೇಜಿಗೆ ಕಳ್ಳಿಗೆ ಹೆಸರಿಡಲು ಆಗ್ರಹ
0
ಅಕ್ಟೋಬರ್ 31, 2022