ಕಾಸರಗೋಡು: ಇತಿಹಾಸ ಪ್ರಸಿದ್ಧ ಕಾಸರಗೋಡು ಕೋಟೆ ನಾಯಕರ ವಂಶಸ್ಥರ ಕುಲದೇವರಾದ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆದ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಕನ್ನಡ `Àವನ ಕಾಸರಗೋಡು ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್, ಕೋಶಾಧಿಕಾರಿಯಾಗಿ ನಾಗೇಶ್ ಕೆ.ಮಂಗಳೂರು ಸರ್ವಾನುಮತದಿಂದ ಆಯ್ಕೆಯಾದರು.
ನೂತನ ಅಧ್ಯಕ್ಷರಿಗೆ ದೇವಸ್ಥಾನ ಸಮಿತಿಯ ಮುಂದಿನ ಕಾರ್ಯಾಚರಣೆಗೆ ಅ„ಕಾರ ಹಸ್ತಾಂತರ ಶ್ರೀ ದೇವರ ನಡೆಯಲ್ಲಿ ಕಾರ್ಯದರ್ಶಿಗಳೂ ಕ್ಷೇತ್ರ ಪಾತ್ರಿಗಳೂ ಆದ ಶ್ರೀ ಪ್ರವೀಣ್ ನಾಯಕ್ ಪಾಂಗೋಡು ನೇತೃತ್ವದಲ್ಲಿ ರಮೇಶ್ ಕುಂಬಳೆ ನೆರವೇರಿಸಿದರು. ಸಮಿತಿಯ ಉಪಾಧ್ಯಕ್ಷರಾದ ಸಂತೋಷ್ ನಾಯಕ್ ಪುತ್ತೂರು, ಜತೆ ಕಾರ್ಯದರ್ಶಿ ಪ್ರದೀಪ್ ನಾಯಕ್ ನಾಗರಕಟ್ಟೆ, ಕ್ಷೇತ್ರ ನಿರ್ವಹಣಾಧಿಕಾರಿ ನವೀನ್ ನಾಯಕ್, ಕಾರ್ಯಕಾರೀ ಸದಸ್ಯರಾದ ಶಾಮ್ ಸುಂದರ್, ಕೃಷ್ಣ ಪ್ರಸಾದ್ ಕುಂಬಳೆ, ಗಗನ್ ಮಂಗಳೂರು, ಜಯಂತಿ ಕೋಟೆಕಣಿ, ನಿರ್ಮಲಾ ರಮೇಶ್ ಕುಂಬಳೆ, ಗಾಯತ್ರಿ ನಾಗೇಶ್ ಮಂಗಳೂರು, ಸಂಧ್ಯಾರಾಣಿ ಟೀಚರ್ ಕಾಸರಗೋಡು, ಮೇಘನಾ ಗಣೇಶ್ ಮಂಗಳೂರು ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರವೀಣ್ ನಾಯಕ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಪ್ರದೀಪ್ ನಾಯಕ್ ನಾಗರಕಟ್ಟೆ ವಂದಿಸಿದರು. ನವೀನ್ ನಾಯಕ್ ನಿರ್ವಹಿಸಿದರು.
ಪಾಂಗೋಡು : ನೂತನ ಪದಾಧಿಕಾರಿಗಳ ಆಯ್ಕೆ
0
ಅಕ್ಟೋಬರ್ 31, 2022