ಕಾಸರಗೋಡು: ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಲಾದ ಉಪಜಿಲ್ಲಾ ಶಾಲಾ ವಿಜ್ಞಾನ-ವೃತ್ತಿಪರಿಚಯ ಮೇಳಕ್ಕಾಗಿ ನಿರ್ಮಿಸಲಾದ ಚಪ್ಪರ ಕುಸಿದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಯಗೊಂಡಿರುವ ಘಟನೆ ದುರಾದೃಷ್ಟಕರ ಎಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಬೃಹತ್ ಚಪ್ಪರ ಹಾಗೂ ವೇದಿಕೆ ನಿರ್ಮಿಸಲಾಗಿದ್ದು, ಇದು ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ. ದುರಂತದಲ್ಲಿ ಗಾಯಗೊಂಡ ಮಕ್ಕಳು ಮತ್ತು ಸಿಬ್ಬಂದಿ ಶೀಘ್ರ ಗುಣಮುಖರಾಗಲಿ ಎಂದು ಸಂಸದರು ಹಾರೈಸಿದ್ದು, ಈ ಸಂದಿಗ್ಧ ಸಂದರ್ಭದಲ್ಲಿ ಅವರಿಗೆ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು.
ಚಪ್ಪರ ಕುಸಿದು ದುರ್ಘಟನೆ ದುರಾದೃಷ್ಟಕರ-ಸಂಸದ
0
ಅಕ್ಟೋಬರ್ 21, 2022
Tags