ಬದಿಯಡ್ಕ: ನೀರ್ಚಾಲು ಸಮೀಪದ ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಕಂಬಾರು ಕೇ|ಶವ ಭಟ್ ನೇತ್ರತ್ವದಲ್ಲಿ ವಾಲಿ ಮೋಕ್ಷ ತಾಳಮದ್ದಲೆ ನಡೆಯಿತು ಭಾಗವತರಾಗಿ ಕಂಬಾರು ಕೇಶವ ಭಟ್, ಚೆಂಡೆ ಮದ್ದಲೆಯಲ್ಲಿ ಉದಯ ಕಂಬಾರು ಮತ್ತು ಕ್ರಷ್ಣಮೂರ್ತಿ ಕೇಚನಡಿ ಸಹಕರಿಸಿದರು. ನೀರ್ಚಾಲು ಬಾಲಕ್ರಷ್ಣ ಆಚಾರ್ಯ(ವಾಲಿ), ಶಿವರಾಮ ಭಂಡಾರಿ(ರಾಮ), ಮುರಳೀಧರ ಯಾದವ್ ನಾಯ್ಕಾಪು(ಸುಗ್ರೀವ), ಡಾ.ಬೇ.ಸಿ. ಗೋಪಾಲಕ್ರಷ್ಣ ಭಟ್(ಹನುಮಂತ), ಸುಮನ್ ರಾಜ್ ನೀಲಂಗಳ(ತಾರೆ) ಪಾತ್ರವರ್ಗದಲ್ಲಿ ತಾಳಮದ್ದಲೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.