ಕಾಸರಗೋಡು: ಪರಪ್ಪ ಬ್ಲಾಕ್ ಮಟ್ಟದ ಹಾಲು ಉತ್ಪಾದಕರ ಸಂಗಮವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು. ಹೈನುಗಾರಿಕಾ ಅಭಿವೃದ್ಧಿ ಇಲಾಖೆ, ಪರಪ್ಪ ಬ್ಲಾಕ್‍ನ ವಿವಿಧ ಡೈರಿ ಸಹಕಾರಿ ಸಂಘಗಳು, ತ್ರಿಸ್ತರ ಪಂಚಾಯಿತಿ ಹಾಗೂ ಮಿಲ್ಮಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ರಾಜಪುರಂ ಹೋಲಿ ಫ್ಯಾಮಿಲಿ ಪ್ಯಾರಿಷ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು.
ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಹೈನು ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎನ್.ವೀಣಾ ಯೋಜನೆ ವಿವರಿಸಿದರು. ರಾಜಪುರಂ ಫೆÇರೋನಾವಿಕಾರ್ ಫಾ.ಜಾರ್ಜ್ ಪುತ್ತುಪರಂಬಿ ಮುಖ್ಯ ಅತಿಥಿಯಾಗಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಶ್ರೀಜಾ, ಟಿ.ಕೆ.ರವಿ, ಗಿರಿಜಾ ಮೋಹನನ್, ಪರಪ್ಪ ಬ್ಲಾಕ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನೀ ಕೃಷ್ಣನ್, ಬ್ಲಾಕ್ ಸದಸ್ಯರಾದ ರೇಖಾ ಸಿ.ಕುಞÂಕಣ್ಣನ್, ಜೋಸ್ ಮಾವೇಲಿಲ್, ಕಲ್ಲಾರ್ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಗೋಪಿ, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು,ಅಧಿಕಾರಿಗಳು, ಹೈನುಗಾರರು ಭಾಗವಹಿಸಿದ್ದರು. ಡಾ.ಎಂ.ಮುಹಮ್ಮದ್ ಆಸಿಫ್ ಮತ್ತು ವಿ.ಮನೋಹರನ್ ಹೈನುಗಾರಿಕೆ ಅಭಿವೃದ್ಧಿ ವಿಚಾರ ಸಂಕಿರಣ ನಡೆಸಿಕೊಟ್ಟರು. ಕಾಸರಗೋಡು ಡೈರಿ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಸಿಜೋನ್ ಜಾನ್ಸನ್ ಕುನ್ನತ್ ಮೋಡರೇಟರ್ ಆಗಿ ಸಹಕರಿಸಿದರು. ರಾಜಪುರಂ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಎ.ಪ್ರಭಾಕರನ್ ಸ್ವಾಗತಿಸಿದರು. ಪರಪ್ಪ ಬ್ಲಾಕ್ ಡೈರಿ ಅಭಿವೃದ್ಧಿ ಅಧಿಕಾರಿ ಪಿ.ವಿ.ಮನೋಜಕುಮಾರ್ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಜಾನುವಾರು ಪ್ರದರ್ಶನ, ಹೈನುಗಾರರಿಗೆ ಸನ್ಮಾನ, ಹೈನುಗಾರಿಕಾ ಗುಂಪುಗಳಿಗೆ ಪ್ರಶಸ್ತಿ ವಿತರಣೆ, ಹೈನುಗಾರಿಕೆ ಅಭಿವೃದ್ಧಿ ವಿಚಾರ ಸಂಕಿರಣ, ಮೇವು ಪ್ರದರ್ಶನ ನಡೆಯಿತು.
ಪರಪ್ಪ: ಹಾಲು ಉತ್ಪಾದಕರ ಸಂಗಮ, ಜಾನುವಾರು ಪ್ರದರ್ಶನ
0
ಅಕ್ಟೋಬರ್ 10, 2022
Tags