ಕೊಚ್ಚಿ: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಇಂದು ಪ್ರತಿ ಗ್ರಾಂಗೆ 10 ರೂಪಾಯಿ ಏರಿಕೆಯಾಗಿ 4,655 ರೂಪಾಯಿಗಳಿಗೆ ತಲುಪಿದೆ. ಪವನ್ 80 ರೂಪಾಯಿ ಏರಿಕೆಯಾಗಿ 37,240 ರೂ.ಗೆ ವಿಕ್ರಯಿಸಲಾಗಿದೆ.
ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ನಾಲ್ಕನೇ ದಿನ ಏರಿಕೆಕಂಡು ಲಾಭ ದಾಖಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 1,653 ಡಾಲರ್ ದಾಖಲಾಗಿದೆ. ಇದರಿಂದಾಗಿ ಚಿನ್ನದ ಬೆಲೆ ಏರಿಕೆಯಾಗಿದೆ. ನಿನ್ನೆಯ ಬೆಲೆ ಪ್ರತಿ ಗ್ರಾಂಗೆ 4,645 ರೂ., ಪವನ್ ಗೆ 37,160 ರೂ.ರಷ್ಟಿತ್ತು.
ಚಿನ್ನದ ಬೆಲೆ ಮತ್ತೆ ಏರಿಕೆ
0
ಅಕ್ಟೋಬರ್ 19, 2022