ಬದಿಯಡ್ಕ :'ಕನ್ನಡ ಭಾಷೆಯ ಬಳಕೆ ನಿತ್ಯ ಆಚರಣೆಯಾಗಬೇಕು. ಕನ್ನಡದ ಸಿರಿತನವನ್ನು ಓದಬೇಕು. ಕಾಸರಗೋಡು ಕನ್ಡಡದ ಶ್ರೀಮಂತ ನೆಲ. ಕನ್ನಡ ಭಾಷೆಯೇ ನಮ್ಮ ಅಂತ:ಸತ್ವದ ಬಲ' ಎಂದು ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ ಹೇಳಿದರು.
ಅವರು ಮಂಗಳವಾರ ನಾರಂಪಾಡಿ ಕ್ಷೇತ್ರದಲ್ಲಿ ನೀರ್ಚಾಲಿನ ಕೇರಳ ರಾಜ್ಯ ಕನ್ನಡ ಬರಹಗಾರರ ಸಂಘ ಹಾಗೂ ಕಾಸರಗೋಡಿನ ಕೆದಿಲಾಯ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ದಸರಾ ನಾಡಹಬ್ಬ ಆಚರಣೆಯನ್ನು ದೀಪ ಬೆಳಹಿಸಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಜಯದೇವ ಖಂಡಿಗೆ ಭಾಗವಹಿಸಿದ್ದರು. ಸಂಘಟನೆಯ ಅಧ್ಯಕ್ಷ ಜಿ. ವಿರೇಶ್ವರ ಕರ್ಮರ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಉಪಾಧ್ಯಕ್ಷೆ ಪಾಣಿ ಪಿ ಎಸ್, ಕಾರ್ಯದರ್ಶಿ ಪ್ರಭಾವತಿ ಕೆದಿಲಾಯ ಪುಂಡೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಶೆಟ್ಟಿ ಬೇಳ, ಗೀತಾ ಎಂ ಭಟ್, ಜ್ಯೋತ್ಸ್ನಾ ಕಡಂದೇಲು, ವಿರಾಜ್ ಅಡೂರು, ಪ್ರಧ್ಯುಮ್ನ ಶರ್ಮ ಉಪ್ಪಂಗಳ, ಆದ್ಯಂತ್ ಅಡೂರು, ಅನ್ವಿತಾ ತಲ್ಪನಾಜೆ, ಲಲಿತಾ ಕೃಷ್ಣ ಭಟ್ ಏತಡ್ಕ ಮೊದಲಾದವರು ಭಾಗವಹಿಸಿದ್ದರು. ಸುಶೀಲಾ ಪದ್ಯಾಣ ಸ್ವಾಗತಿಸಿದರು. ಶ್ರೀಹರ್ಷ ವಂದಿಸಿದರು. ಕಾರ್ಯದರ್ಶಿ ಪುಂಡೂರು ಪ್ರಭಾವತಿ ಕೆದಿಲಾಯ ನಿರೂಪಿಸಿದರು. ಈ ಸಂದರ್ಭದಲ್ಲಿ ಅನೇಕ ಮಂದಿ ಕಲಾವಿದರಿಂದ ಭರತನಾಟ್ಯ, ಗಾಯನ, ಹರಿಕಥೆ, ಭಜನೆ ಮೊದಲಾದ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದುವು.
ನಾರಂಪಾಡಿಯಲ್ಲಿ ದಸರಾ ನಾಡಹಬ್ಬ ಆಚರಣೆ
0
ಅಕ್ಟೋಬರ್ 06, 2022
Tags