ನವದೆಹಲಿ: ಅದಾನಿ ಡೇಟಾ ನೆಟ್ವರ್ಕ್ ಗೆ ಪೂರ್ಣ ಪ್ರಮಾಣದ ಟೆಲಿಕಾಮ್ ಸೇವೆಗಳ ಪರವಾನಗಿಯನ್ನು ನೀಡಲಾಗಿದೆ. ಈ ಪರವಾನಗಿ ಮೂಲಕ ದೇಶದಲ್ಲಿ ಟೆಲಿಕಾಮ್ ಸೇವೆಗಳನ್ನು ಅದಾನಿ ಡೇಟಾ ನೆಟ್ವರ್ಕ್ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ.
ಅದಾನಿ ಸಮೂಹ ಇತ್ತೀಚಿನ ಹರಾಜು ಪ್ರಕ್ರಿಯೆಯಲ್ಲಿ ಸ್ಪೆಕ್ಟ್ರಮ್ ಖರೀದಿಯ ಮೂಲಕ ಟೆಲಿಕಾಮ್ ಕ್ಷೇತ್ರಕ್ಕೆ ಎಂಟ್ರಿ ನೀಡಿದೆ. ಮತ್ತೊಬ್ಬ ಅಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ, ಪರವಾನಗಿಯನ್ನು ಸೋಮವಾರ ನೀಡಲಾಗಿದೆ. ಈ ಕುರಿತ ಇ-ಮೇಲ್ ಪ್ರಶ್ನೆಗಳಿಗೆ ಅದಾನಿ ಸಮೂಹ ಪ್ರತಿಕ್ರಿಯೆ ನೀಡಿಲ್ಲ.
ಅದಾನಿ ಡೇಟಾ ನೆಟ್ವರ್ಕ್ ಲಿಮಿಟೆಡ್ (ಎಡಿಎನ್ಎಲ್) 26 ಜಿಹೆಚ್ ಝೆಡ್ ಮಿಲಿಮೀಟರ್ ವೇವ್ ಬ್ಯಾಂಡ್ ನಲ್ಲಿ 400 ಎಂಹೆಚ್ ಝೆಡ್ ಸ್ಪೆಕ್ಟ್ರಮ್ ನ್ನು 20 ವರ್ಷಗಳಿಗೆ 212 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.
ಏರ್ ವೇವ್ ಗಳನ್ನು ತನ್ನ ಡೇಟಾ ಸೆಂಟರ್ ಗಳಿಗೆ ಹಾಗೂ ತನ್ನ ಉದ್ಯಮಗಳಿಗೆ ನೆರವಾಗುವಂತೆ ಸೂಪರ್ ಆಪ್ ಗಳಿಗೆ ಬಳಕೆ ಮಾಡಲು ಯೋಜನೆ ಹೊಂದಿರುವುದಾಗಿ ಅದಾನಿ ಸಮೂಹ ಹೇಳಿದೆ.