ಕಾಸರಗೋಡು: ಎಲ್ಲ ಹೆಣ್ಮಕ್ಕಳಿಗೂ ಲಿಂಗಸಮಾನತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಹದಿಹರೆಯ ಬಲವರ್ಧನೆ ಹೆಸರಿನಲ್ಲಿ ಜಾಗೃತಿ ಅಭಿಯಾನ ಆರಂಭಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಪಿ.ಸತಿದೇವಿ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಸಭೆ ಬಳಿಕ ಅವರು ಮಾತನಾಡಿದರು.
ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸುರಕ್ಷತೆಯನ್ನು ಖಾತ್ರಿಪಡಿಸಿ, ಗೌರವಯುತವಾಗಿ ಕೆಲಸ ಮಾಡುವ ವಾತಾವರಣ ನಿರ್ಮಿಸಬೇಕು. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸುತ್ತದೆ ಎಂದು ತಿಳಿಸಿದರು. ಶಾಲೆಯಲ್ಲಿ ಆಂತರಿಕ ಕುಂದುಕೊರತೆ ನಿವಾರಣಾ ಸಮಿತಿ ರಚಿಸುವ ಪ್ರಸ್ತಾವನೆ ಇದ್ದು, ದೂರು ಪರಿಹರಿಸಲು ಐಸಿಸಿ ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿಯ ಜಾಗೃತ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಜಾಗೃತ ಸಮಿತಿಗಳನ್ನು ಬಲಪಡಿಸಬೇಕು. ಕಾಸರಗೋಡಿನಲ್ಲಿ ಜಾಗೃತಿ ಮೂಡಿಸಲು ರಾಜ್ಯ ಮಟ್ಟದ ವಿಚಾರ ಸಂಕಿರಣ ನ.28ರಂದು ನಡೆಯಲಿದೆ. ತ್ರಿಸ್ತರ ಪಂಚಾಯತ್ ಪ್ರತಿನಿಧಿಗಳು, ಪೆÇಲೀಸ್ ಮತ್ತು ಮಹಿಳಾ ರಕ್ಷಣಾ ಸಿಬ್ಬಂದಿ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ
ಗುರುವಾರ ನಡೆದ ಸಭೆಯಲ್ಲಿ 30 ದೂರುಗಳನ್ನು ಪರಿಗಣಿಸಲಾಗಿದ್ದು, 10 ದೂರುಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಏಳು ದೂರುಗಳಲ್ಲಿ ಪೆÇಲೀಸ್ ವರದಿ ಕೇಳಲಾಗಿದೆ. ಇಬ್ಬರನ್ನು ಕೌನ್ಸೆಲಿಂಗ್‍ಗೆ ಬಿಡಲಾಗಿತ್ತು. 11 ದೂರುಗಳನ್ನು ಮುಂದಿನ ಸಭೆಗೆ ಮುಂದೂಡಲಾಗಿದೆ. ವಕೀಲೆ ರೇಣುಕಾದೇವಿ ತಂಗಚ್ಚಿ, ಮಹಿಳಾ ಸೆಲ್ ಎಸ್‍ಐ ಚಂದ್ರಿಕಾ, ಸಿಪಿಒ ಶೀನಾ, ಕೌನ್ಸಿಲರ್ ಜಿಶಾ ಉಪಸ್ಥಿತರಿದ್ದರು.
ಎಲ್ಲ ಹೆಣ್ಮಕ್ಕಳಿಗೂ ಲಿಂಗಸಮಾನತೆ ಬಗ್ಗೆ ಅರಿವು ಮೂಡಿಸಬೇಕು: ಮಹಿಳಾ ಆಯೋಗ
0
ಅಕ್ಟೋಬರ್ 29, 2022
Tags