ಕಾಸರಗೋಡು: ಮಕ್ಕಳಲ್ಲಿ ಕುಷ್ಠರೋಗವನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಲು ರಾಜ್ಯ ಆರೋಗ್ಯ ಇಲಾಖೆಯ ಬಾಲಮಿತ್ರ ಯೋಜನೆಯನ್ನು ಜಿಲ್ಲೆಯಲ್ಲಿ ವ್ಯಾಪಕವಾಗಿ ಜಾರಿಗೊಳಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಯೋಜನೆ ಜಾರಿ ಬಗ್ಗೆ ಚರ್ಚಿಸಲಾಯಿತು.
ಬಾಲಮಿತ್ರ ಯೋಜನೆ ಮೂಲಕ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳಿಗೆ ಕುಷ್ಠರೋಗ ತಪಾಸಣೆ ಮಾಡಲಾಗುವುದು. ಇದರ ಅಂಗವಾಗಿ ಜಿಲ್ಲಾ ಎಲ್ಲಾ ಶಾಲೆಗಳ ಶಿಕ್ಷಕರಿಗೆ ವೈದ್ಯಕೀಯ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಶಿಕ್ಷಕರು ಕುಷ್ಠರೋಗದ ಮುಖ್ಯ ಲಕ್ಷಣಗಳ ಬಗ್ಗೆ ತರಗತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ನಂತರ ಸ್ವಯಂ ಪರೀಕ್ಷೆ ಅಥವಾ ಪೆÇೀಷಕರ ಸಹಾಯದಿಂದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿಮ ಶಿಕ್ಷಕರು ಮಕ್ಕಳ ತಪಾಸಣಾ ವರದಿಯನ್ನು ಆಯಾ ಪ್ರದೇಶದ ಆರೋಗ್ಯ ಕಾರ್ಯಕರ್ತರಿಗೆ ಹಸ್ತಾಂತರಿಸುತ್ತಾರೆ ಮತ್ತು ರೋಗದ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಪ್ರಸ್ತುತ ಕುಷ್ಠರೋಗದಿಂದ ಚಿಕಿತ್ಸೆ ಪಡೆಯುತ್ತಿರುವ 29 ಜನರಲ್ಲಿ ಇಬ್ಬರು ಮಕ್ಕಳಿದ್ದಾರೆ.
ಸಹಾಯಕ ಜಿಲ್ಲಾಧಿಕಾರಿ (ಆರ್‍ಆರ್) ಸಿರೋಶ್ ಪಿ.ಜಾನ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಡಿಎಂಒ ಡಾ.ಇಮೋಹನನ್, ಡಿಎಂಒ (ಹೋಮಿಯೊ) ಡಾ.ಅರ್ಷಾ ಮೇರಿ, ಡಿಎಂಒ (ಆಯುರ್ವೇದ) ಡಾ.ಟಿ.ಎಂ.ವಿಜಯಕುಮಾರ್., ಪ.ವರ್ಗ ಅಭಿವೃದ್ಧಿ ಅಧಿಕಾರಿ ಟಿ.ಎಂ.ಮಲ್ಲಿಕಾ, ಡಿ.ಡಿ.ಇ. ಆಡಳಿತ ಸಹಾಯಕ ಬಿ.ಸುರೇಂದ್ರನ್, ಉಪ ಸಮೂಹ ಮಾಧ್ಯಮ ಅಧಿಕಾರಿ ಎಸ್.ಸಯನಾ ಉಪಸ್ಥಿತರಿದ್ದರು.
ಶಾಲಾ ಮಕ್ಕಳಲ್ಲಿ ಕುಷ್ಠರೋಗ ಪತ್ತೆಗೆ 'ಬಾಲಮಿತ್ರ ಯೋಜನೆ'
0
ಅಕ್ಟೋಬರ್ 04, 2022
Tags