ಕಾಸರಗೋಡು: ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಹಾಗೂ ಕಾಸರಗೋಡು ಜನಮೈತ್ರಿ ಪೆÇೀಲೀಸ್ ವತಿಯಿಂದ ನಡೆದ ಮಾದಕ ದ್ರವ್ಯ ವಿರೋಧಿ ಅಧಿವೇಶನವು ಗಮನ ಸೆಳೆಯಿತು. ಕಲ್ಲಂಗೈ ಸಾಲ್ವ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ವಕೀಲೆ ಸಮೀರ ಫೈಸಲ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಉಪವಿಭಾಗದ ಉಪಪೆÇಲೀಸ್ ಅಧೀಕ್ಷಕ ಮುಹಮ್ಮದ್ ನದೀಮುದ್ದೀನ್ ಐಪಿಎಸ್ ಮಾದಕದ್ರವ್ಯದಿಂದ ಉಂಟಾಗುವ ದುಷ್ಪರಿಣಾಮದ ಬಗೆಗಿನ ತರಗತಿ ಉದ್ಘಾಟಿಸಿದರು. ಕಾಸರಗೋಡು ಸಿ.ಐ ಅಜಿತ್ ಕುಮಾರ್, ಅಬಕಾರಿ ಪ್ರಿವೆಂಟಿವ್ ಆಫೀಸರ್ ಸಿ.ಕೆ.ವಿ ಸುರೇಶ್ ಮತ್ತಿತರರು ತರಗತಿ ನಡೆಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಜೀಬ್ ಕಂಬಾರ್, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಖದೀಜ ಕಾದರ್, ನಿಸಾರ್ ಕುಲಂಕರ, ಪ್ರಮೀಳಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಮೀಲಾ ಸಿದ್ದೀಕ್, ಬ್ಲಾಕ್ ಪಂಚಾಯಿತಿ ಸದಸ್ಯರಾದ ಸೀನತ್ ನಸೀರ್, ಸುಕುಮಾರನ್ ಕುದ್ರೆಪ್ಪಾಡಿ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತೆ ಶೀಬಾ ಆಯೇಷಾ ಕುಲಂಕರ ಹಾಗೂ ರೋಮಾಂಚಂ ಚಿತ್ರದಲ್ಲಿ ನಟಿಸಿರುವ ಅಫ್ಜಲ್ ಪಿಎಚ್ ಅವರನ್ನು ಸನ್ಮಾನಿಸಲಾಯಿತು. ಶಂಸು ಬ್ಲಾರ್ಕೋಟ್ ನೇತೃತ್ವದ ಕಲಾ ಸಂಜೆ ಹಾಗೂ ಆರ್.ಕೆ.ಕವಾಯಿ ಅವರಿಂದ ಜಾದೂ ಪ್ರದರ್ಶನ ನಡೆಯಿತು.
ಮೊಗ್ರಾಲ್‍ಪುತ್ತೂರಿನಲ್ಲಿ ಮಾದಕದ್ರವ್ಯ ವಿರುದ್ಧ ಅಭಿಯಾನ
0
ಅಕ್ಟೋಬರ್ 30, 2022
Tags