ತಿರುವನಂತಪುರ: ವಿಝಿಂಜಂ ಬಂದರು ಮುಷ್ಕರದ ಅಂಗವಾಗಿ ಅಕ್ಟೋಬರ್ 17 ರಂದು(ಇಂದು) ಮೀನುಗಾರರು ನಡೆಸಬೇಕಿದ್ದ ರಸ್ತೆ ತಡೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಜೆರೊಮಿಕ್ ಜಾರ್ಜ್ ಆದೇಶ ಹೊರಡಿಸಿದ್ದಾರೆ.
ವಿಝಿಂಜಂ ಬಂದರು ಮುಷ್ಕರದ ಅಂಗವಾಗಿ ವಿಝಿಂಜಂ ಜಂಕ್ಷನ್ ಮತ್ತು ಮುಳ್ಳೂರಿನಲ್ಲಿ ಲ್ಯಾಟಿನ್ ಆರ್ಚ್‍ಡಯಾಸಿಸ್ ನೇತೃತ್ವದಲ್ಲಿ ಮುತ್ತಿಗೆ ಹಾಕಲು ಮೀನುಗಾರರು ನಿರ್ಧರಿಸಿದ್ದರು.
ನಿಷೇಧದ ಹೊರತಾಗಿ, ಘೋಷಣೆ ಕೂಗುವುದನ್ನೂ ನಿಯಂತ್ರಿಸಲಾಗಿದೆ. ಧರ್ಮಾಧಿಕಾರಿಗಳ ಮುಷ್ಕರ ಹಾಗೂ ಸಾರ್ವಜನಿಕರ ಪ್ರತಿಭಟನೆಯಿಂದ ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಲಿದೆ ಎಂಬ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಆರ್ಚ್‍ಡಯಾಸಿಸ್ ಎತ್ತಿರುವ ಎಲ್ಲಾ 7 ಬೇಡಿಕೆಗಳ ಬಗ್ಗೆ ಸರ್ಕಾರದಿಂದ ಸಕಾರಾತ್ಮಕ ಮತ್ತು ಸ್ಪಷ್ಟ ನಿಲುವು ಮತ್ತು ಕ್ರಮಗಳನ್ನು ತೆಗೆದುಕೊಳ್ಳದಿರುವುದನ್ನು ವಿರೋಧಿಸಿ ಕಾರ್ಮಿಕರು ದಿಗ್ಬಂಧನಕ್ಕೆ ಮುಂದಾಗಿರುವರು.
ವಿಝಿಂಜಂ ಬಂದರು ಮುಷ್ಕರ; ರಸ್ತೆ ತಡೆಗಳಿಗೆ ನಿಷೇಧ
0
ಅಕ್ಟೋಬರ್ 16, 2022
Tags