ಬದಿಯಡ್ಕ : ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ (ಕೆ.ಪಿ.ಎಸ್.ಟಿ.ಎ.) ಕುಂಬಳೆ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶಿಕ್ಷಕರಿಗಾಗಿ ಉಪಜಿಲ್ಲಾ ಮಟ್ಟದ ನಾಯಕತ್ವ ತರಬೇತಿ ಶಿಬಿರ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಸಭಾಂಗಣದಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಕೆಪಿಎಸ್ ಟಿಎ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎ.ವಿ.ಗಿರೀಶನ್ ಮಾತನಾಡಿ, ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ಮಧ್ಯಾಹ್ನದ ಊಟದ ಪ್ರಮಾಣವನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ಖಾಸಗಿ ಆಸ್ಪತ್ರೆಗಳು ಮೆಡಿ ಸೆಪ್ ಯೋಜನೆಯನ್ನು ಆರ್ಥಿಕ ಅಭಿವೃದ್ಧಿಗೆ ಪರಿವರ್ತಿಸುತ್ತಿದ್ದು, ಸರ್ಕಾರ, ಆಸ್ಪತ್ರೆಗಳು ಮತ್ತು ವಿಮಾ ಕಂಪನಿಗಳು ಎಂಬಾನಲ್ ಪಟ್ಟಿಯಲ್ಲಿರುವ ಆಸ್ಪತ್ರೆಗಳಿಗೆ ಎಲ್ಲಾ ರೋಗ ವರ್ಗಗಳನ್ನು ಒಳಗೊಳಿಸದೆ ಕುತಂತ್ರ ಮಾಡುತ್ತಿವೆ ಎಂದು ಹೇಳಿದರು.
ಉಪಜಿಲ್ಲಾ ಅಧ್ಯಕ್ಷೆ ಜಲಜಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಪ್ರಶಾಂತ ಕಾನತ್ತೂರು, ಜಿಲ್ಲಾ ಕಾರ್ಯದರ್ಶಿ ಕೆ.ಶ್ರೀನಿವಾಸನ್, ಮಂಡಲ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಜಿಲ್ಲಾ ಜೊತೆ ಕಾರ್ಯದರ್ಶಿ ಕೆ.ಗೋಪಾಲಕೃಷ್ಣನ್, ರಾಜ್ಯ ಭಾಷಾ ಅಲ್ಪಸಂಖ್ಯಾತರ ಸಮಿತಿ ಅಧ್ಯಕ್ಷ ಗಂಗಾಧರ ಶೆಟ್ಟಿ, ಎ.ರಾಧಾಕೃಷ್ಣನ್, ಶರತ್ ಚಂದ್ರ ಶೆಟ್ಟಿ, ಕೃಷ್ಣ ಸಿ.ಪಿ.ಕೆ ಹಾಗೂ ಸೋಮನಾಥನ್ ಮಕ್ಕಿಕಾನ ಶುಭ ಹಾರೈಸಿದರು. ಉಪಜಿಲ್ಲಾ ಕಾರ್ಯದರ್ಶಿ ನಿರಂಜನ ರೈ ಸ್ವಾಗತಿಸಿ, ಖಜಾಂಚಿ ಮಲ್ಲಿಕಾ ಪಿ.ವಿ. ವಂದಿಸಿದರು.
ಮಕ್ಕಳ ಶಾಲಾ ಊಟದ ಭತ್ಯೆ ಹೆಚ್ಚಿಸಿ: ಕೆ.ಪಿ.ಎಸ್.ಟಿ.ಎ.
0
ಅಕ್ಟೋಬರ್ 17, 2022
Tags