ಮುಳ್ಳೇರಿಯ: ಯಾವುದೇ ಒಂದು ಪ್ರದೇಶ ಮಾದಕ ವ್ಯಸನದ ಪಿಡುಗಿನ ವಿರುದ್ಧ ಪೋಲೀಸರ ಕಲ್ಪನೆಯೊಂದಿಗೆ ಕೈಜೋಡಿಸಿದಾಗ, ಅದು ಹೊಸ ಯಶೋಗಾಥೆಗೆ ಮತ್ತು ಸಾಮಾಜಿಕ ಪಿಡುಗಿನ ವಿರುದ್ಧ ಹೊಸ ಹೋರಾಟವಾಗುತ್ತದೆ. ಮಾದಕ ವ್ಯಸನದ ವಿರುದ್ಧ ಪೋಲೀಸರ ಹೋರಾಟವನ್ನು ಕಾಞಂಗಾಡ್ ಸಮೀಪದ ಕೊಳವಯಲ್ ಗ್ರಾಮ ಕೈಗೆತ್ತಿಕೊಂಡು ಯಶಸ್ವಿಯಾಗಿ ಮಾದರಿಯಾಗಿದೆ. ವ್ಯಕ್ತಿ ಹಾಗೂ ಸಮಾಜವನ್ನು ಹಾಳು ಮಾಡುತ್ತಿರುವ ಮಾದಕ ವ್ಯಸನದ ಪಿಡುಗು ತೊಲಗಿಸಲು ಹೊಸದುರ್ಗ ಪೋಲೀಸರು ಹಾಗೂ ಜನಮೈತ್ರಿ ಪೋಲೀಸರೊಂದಿಗೆ ಜನತೆ ಕೈಜೋಡಿಸಿದ್ದರಿಂದ ‘ಕ್ಲೀನ್ ಕೊಳವಯಲ್’ ಯೋಜನೆ ಗುರಿ ಮುಟ್ಟಿತು.
ಸಾಮಾಜಿಕ ಜಾಲತಾಣ ಹಾಗೂ ಇತರೆ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಜತೆಗೆ ಮಾದಕ ವಸ್ತುಗಳ ಸೇವನೆ ಹೆಚ್ಚಿರುವ ಹೊಸದುರ್ಗದ ಕೊಳವಯಲ್ ನಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಾದಕ ವ್ಯಸನ ತಡೆಗೆ ಕಾರ್ಯಚರಣೆ ನಡೆಸಲಾಯಿತು. ಠಾಣಾ ವ್ಯಾಪ್ತಿಯ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಹಾಗೂ ಯುವ ಸಂಘಟನೆಗಳ ಹಾಗೂ ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಆರಂಭವಾದ ಮದ್ಯ ಮುಕ್ತ ಕಾರ್ಯಕ್ರಮ, 300 ಜನರನ್ನೊಳಗೊಂಡ ಸಭೆ ನಡೆಸಿ ಸ್ವಚ್ಛ ಕೊಳವಯಲ್ ಯೋಜನೆಯ ಅಂಗವಾಗಿ ಜನಸಂಘ ರಚಿಸಲಾಯಿತು. .
ವಾಟ್ಸಾಪ್ ಗ್ರೂಪ್‍ಗಳ ಮೂಲಕ, ಸದಸ್ಯರಿಗೆ ಸೂಚನೆಗಳನ್ನು ನೀಡಲಾಯಿತು ಮತ್ತು ಪ್ರತಿ ಪ್ರದೇಶದಲ್ಲಿ ಪ್ರತಿವಾರ ಸಭೆಗಳನ್ನು ಕರೆಯಲಾಯಿತು. ಸಭೆಯಲ್ಲಿ ಮಾದಕ ವಸ್ತುಗಳ ಬಳಕೆದಾರ ಮತ್ತು ಮಾರಾಟಗಾರರ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಪಟ್ಟಿಯ ಪ್ರಕಾರ ನೇರವಾಗಿ ಪ್ರತಿಯೊಬ್ಬರ ಮನೆಗೆ ತೆರಳಿ ಅವರಿಗೆ ಮತ್ತೆ ಜೀವ ತುಂಬುವ ಕಾರ್ಯ ನಡೆಸಿದರು. 3000 ಮನೆಗಳ ಮೇಲೆ ಚಟುವಟಿಕೆಗಳನ್ನು ಕೇಂದ್ರೀಕರಿಸಲಾಗಿತ್ತು. ಅಮಲು ಪದಾರ್ಥಗಳಿಗೆ ವ್ಯಸನಿಯಾಗಿರುವ ಜನರನ್ನು ಡಿ-ಅಡಿಕ್ಷನ್ ಸೆಂಟರ್‍ಗಳಿಗೆ ತಜ್ಞರ ಚಿಕಿತ್ಸೆ ಮತ್ತು ಸಮಾಲೋಚನೆಗಾಗಿ ಕರೆತರಲಾಯಿತು. ನಿರುದ್ಯೋಗದ ಕಾರಣದಿಂದ ಡ್ರಗ್ಸ್ ಮಾರಾಟಕ್ಕೆ ಕಾರಣರಾದವರನ್ನು ಸರಿದಾರಿಗೆ ತಂದು ಸಮಾಜದಲ್ಲಿ ಗೌರವಯುತ ಉದ್ಯೋಗಗಳನ್ನು ಖಾತ್ರಿಪಡಿಸಿದ ಉದಾಹರಣೆಯೂ ಇದೆ. ಈ ಮೂಲಕ ಕೊನೆಗೂ ಈ ಗ್ರಾಮ ಈಗ ನಿಜವಾಗಿಯೂ ಸ್ವಚ್ಚ ಸುಂದರವಾಗಿದೆ.
ವ್ಯಸನಮುಕ್ತ ಸಮಾಜವಾಗಿ ಹೊರಹೊಮ್ಮಿದ ಕೊಳವಯಲ್ ಗ್ರಾಮ: ಯಶೋಗಾಥೆ
0
ಅಕ್ಟೋಬರ್ 12, 2022