ಕುಂಬಳೆ: ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ನೇತೃತ್ವದ ತಂಡ ಅನಂತಪುರ ಇಂಡಸ್ಟ್ರಿಯಲ್ ಪಾರ್ಕ್(ಕೈಗಾರಿಕಾ ಪ್ರಾಂಗಣ)ನಲ್ಲಿರುವ ಚಿಕನ್ ರೆಂಡರಿಂಗ್ ಪ್ಲಾಂಟ್‍ಗೆ ಸೋಮವಾರ ಮಿಂಚಿನ ಭೇಟಿ ನೀಡಿತು. ಈ ಹಿಂದೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಸ್ಥಾವರದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಮನವಿ ಮಾಡಲಾಗಿತ್ತು.
ಜಿಲ್ಲಾ ನೈರ್ಮಲ್ಯ ಮಿಷನ್ ಸಂಯೋಜಕಿ ಎ.ಲಕ್ಷ್ಮಿ ಮಾತನಾಡಿ, ಸಮಸ್ಯೆಗಳು ಬಗೆಹರಿಯುತ್ತಿದ್ದು, ಶೀಘ್ರದಲ್ಲಿಯೇ ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದಿರುವರು. ನವಕೇರಳ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್, ಸ್ಥಳೀಯಾಡಳಿತ ಇಲಾಖೆ ಜೆ.ಎಸ್. ಪಿ.ವಿ.ಭಾಸ್ಕರನ್, ಆಹಾರ ಸುರಕ್ಷತಾ ಸಹಾಯಕ ಆಯುಕ್ತ ಸುಬಿ ಮೋಲ್, ಮಾಲಿನ್ಯ ನಿಯಂತ್ರಣ ಮಂಡಳಿ ಎ. ಇ ಸಜೀಶ ಜಾಯ್
ಮತ್ತಿತರರು ಭೇಟಿ ನೀಡಿದ ತಂಡದಲ್ಲಿದ್ದರು.