ಬೆಂಗಳೂರು: ಖ್ಯಾತ ವಿಜ್ಞಾನಿ ಪ್ರೊ.ಎಂ.ಎಸ್.ಸ್ವಾಮಿನಾಥನ್ ಅವರ ಅಪ್ರಕಟಿತ ಬರಹಗಳು ಮತ್ತು ಆಡಳಿತಾತ್ಮಕ ಟಿಪ್ಪಣಿಗಳನ್ನು ಒಳಗೊಂಡಂತೆ ಹಸಿರು ಕ್ರಾಂತಿಯ ಪಿತಾಮಹ ಎಂದು ಪರಿಗಣಿಸಲ್ಪಟ್ಟಿರುವ ಅವರ ಜೀವನದ ಸಾಧನೆಗಳನ್ನು ವಿವರಿಸುವ ವಿಷಯಗಳನ್ನು ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (NCBS) ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಲಾಗಿದೆ.
ಅವರ 80 ವರ್ಷಗಳ ಕೆಲಸ-ಕಾರ್ಯಗಳು, ಸಾಧನೆಗಳನ್ನು 48 ಸಾವಿರ ಪುಟಗಳಲ್ಲಿ ದಾಖಲಿಸಲಾಗಿದ್ದು ಎನ್ ಸಿಬಿಎಸ್ ನಲ್ಲಿ ಸಾರ್ವಜನಿಕರಿಗೆ ಲಭ್ಯವಿದೆ.
ಇದನ್ನು ಕ್ರೋಢೀಕರಿಸುವ ಕೆಲಸವನ್ನು ಮಾಡಿದವರು ಆರ್ಕೈವಿಸ್ಟ್(ದಾಖಲೆಗಾರ) ವೆಂಕಟ್ ಶ್ರೀನಿವಾಸನ್. ಪತ್ರಿಕೆಗಳು ಸ್ವಾಮಿನಾಥನ್ ಅವರು ವಿವಿಧ ಸಂಸ್ಥೆಗಳು ಮತ್ತು ಸಮಿತಿಗಳೊಂದಿಗೆ ಲಗತ್ತಿಸಲಾದ ಕೃತಿಗಳು, ಜೊತೆಗೆ ಪತ್ರವ್ಯವಹಾರಗಳು, ಸಂಶೋಧನಾ ಟಿಪ್ಪಣಿಗಳು, ಮಾಧ್ಯಮಗಳಲ್ಲಿ ಪ್ರಕಟಣೆಗೊಂಡಿರುವ ವಿಷಯಗಳು, ತುಣುಕುಗಳು, ಛಾಯಾಚಿತ್ರಗಳು ಮತ್ತು ಪ್ರಕಟಿತ ಕೃತಿಗಳನ್ನು ಒಳಗೊಂಡಿವೆ. ಕೆಲವು 1930 ರ ದಶಕದ ಹಿಂದಿನದು.
ಸ್ವಾಮಿನಾಥನ್ ಅವರು ಸಮಾಜ ಮತ್ತು ವಿಜ್ಞಾನವನ್ನು ಬೆಸೆಯುವ ಗುಣ ಹೊಂದಿದ್ದವರು. ಅವರ 80 ದಶಕಗಳ ಜೀವನದ ದಾಖಲೆ ಸಂಗ್ರಹಗಳನ್ನು ಸವಿಸ್ತಾರವಾಗಿ ಸಂಗ್ರಹಿಸಿ ಜನತೆಗೆ ಸಮರ್ಪಿಸುತ್ತಿರುವುದು ಪ್ರಶಂಸನೀಯ ಎಂದು ಕೇಂದ್ರ ಸರ್ಕಾರದ ಮಾಜಿ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ ವಿಜಯ್ ರಾಘವನ್ ಹೇಳುತ್ತಾರೆ.ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ(ICAR)ಯ ನಿರ್ದೇಶಕ ಡಾ ಅಶೋಕ್ ಕುಮಾರ್ ಸಿಂಗ್, ಆಹಾರ ಮತ್ತು ಸಾರ್ವಜನಿಕ ನೀತಿಗೆ ಜನರ ಲಭ್ಯತೆ ಮೇಲೆ ಹಸಿರು ಕ್ರಾಂತಿ ಸಾಕಷ್ಟು ಪರಿಣಾಮ ಬೀರಿತ್ತು. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಹೆಸರನ್ನು ಬದಲಿಸಿತ್ತು. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎನ್ನುತ್ತಾರೆ.
ಈ ದಾಖಲೆಗಳನ್ನು ಜನತೆಯ ಮುಂದೆ ಬಿಡುಗಡೆ ಮಾಡಿರುವುದಕ್ಕೆ ಶ್ರೀನಿವಾಸನ್ ಎಂ ಎಸ್ ಸ್ವಾಮಿನಾಥನ್ ಸಂಶೋಧನಾ ಫೌಂಡೇಶನ್(MSSRF)ನ್ನು ಶ್ಲಾಘಿಸುತ್ತಾರೆ. MSSRF ನ ಡಾ
ಪರಶುರಾಮನ್ ಅವರು ಮುಂದಿನ ಪೀಳಿಗೆಗೆ ಈ ವಸ್ತುವನ್ನು ಸಂರಕ್ಷಿಸಲು ಕೈಗೊಂಡ ಶ್ರಮದಾಯಕ ಪ್ರಯತ್ನಗಳಿಗೆ ಸಲ್ಲಬೇಕು. ಅನೇಕ ಆರ್ಕೈವಿಸ್ಟ್‌ಗಳು ಮತ್ತು ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ವಸ್ತುಗಳನ್ನು ಪಟ್ಟಿ ಮಾಡಲು ಮತ್ತು ಸಿದ್ಧಪಡಿಸಲು ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.