ಕೋಝಿಕ್ಕೋಡ್: ಕೋಟಿ ಬೀಚ್ ಬಳಿ ಸಮುದ್ರ ಮೀಟರ್ ಗಳಷ್ಟು ತಗ್ಗಿ ಆತಂಕಮೂಡಿಸಿದೆ. ಸಮುದ್ರವು ಭೂಮಿಯಿಂದ ಸುಮಾರು 100 ಮೀಟರ್‍ಗಳಷ್ಟು ಹಿಂದಕ್ಕೆ ಬಂದಿದೆ.
ಘಟನೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ಘಟನೆಯು ಮೊದಲು ಸ್ಥಳೀಯರ ಗಮನ ಸೆಳೆಯಿತು. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ 6 ಗಂಟೆ ಸುಮಾರಿಗೆ ಅಗ್ನಿಶಾಮಕ ದಳ ಮತ್ತು ಪೋಲೀಸರು ಬೀಚ್ ಬಳಿ ವಾಸಿಸುತ್ತಿದ್ದ ಜನರನ್ನು ಸ್ಥಳಾಂತರಿಸಿದರು.
ಯಾವುದೇ ಸಂದರ್ಭದಲ್ಲೂ ಹಿಮ್ಮುಖವಾದ ನೀರು ಮತ್ತೆ ಮೇಲೇರುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಬೀಚ್‍ಗೆ ಇಳಿಯದಂತೆ ನಿರ್ಬಂಧ ಹೇರಲಾಗಿದೆ. ನೀರು ಹಿಂದಕ್ಕೆ ತೆರಳಿದ ಸ್ಥಳದಲ್ಲಿ ಕೆಸರು ತುಂಬಿದೆ. ಬೀಚ್‍ನಲ್ಲಿ ಹೆಚ್ಚಿನ ಪೋಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚಿನ ಅಗ್ನಿಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ತುರ್ತು ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇದು ಸಾಮಾನ್ಯ ವಿದ್ಯಮಾನವಾಗಿದ್ದು, ಸುನಾಮಿ ಎಚ್ಚರಿಕೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೋಝಿಕ್ಕೋಡ್ ನಲ್ಲಿ ಮೀಟರ್ ಗಳಷ್ಟು ಹಿಂದೆ ಸರಿದ ಸಮುದ್ರ: ಗಾಬರಿಗೊಳಗಾದ ಸ್ಥಳೀಯರು
0
ಅಕ್ಟೋಬರ್ 30, 2022