ಕೊಲ್ಲಂ: ಡಾ.ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾನಿಲಯದ ವಿಸಿ ನೇಮಕವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಎಂ.ಆರ್. ಶಾ ನೇತೃತ್ವದ ಪೀಠ ಈ ತೀರ್ಪು ಪ್ರಕಟಿಸಿದೆ.
ಡಾ. ರಾಜಶ್ರೀ ಎಂ.ಎಸ್ ಅವರ ನೇಮಕಾತಿಯನ್ನು ನ್ಯಾಯಾಲಯ ಈ ಮೂಲಕ ರದ್ದುಗೊಳಿಸಿದೆ. ವಿಸಿ ನೇಮಕ ಯುಜಿಸಿ ನಿಯಮಾವಳಿಗೆ ಅನುಗುಣವಾಗಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಈ ತೀರ್ಪು ನೀಡಲಾಗಿದೆ. ಅರ್ಜಿದಾರರು ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಮಾಜಿ ಡೀನ್ ಪಿ.ಎಸ್.ಶ್ರೀಜಿತ್. ಎಂಬವರಾಗಿದ್ದರು.
ವಿಶ್ವವಿದ್ಯಾನಿಲಯವು ಯುಜಿಸಿ ನಿಯಮಗಳನ್ನು ಒಪ್ಪಿಕೊಂಡರೆ, ಅದನ್ನು ಜಾರಿಗೊಳಿಸಲು ಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್‍ನ ಇತ್ತೀಚಿನ ತೀರ್ಪಿನ ಆಧಾರದ ಮೇಲೆ ಪಿಎಸ್ ಶ್ರೀಜಿತ್ ಅರ್ಜಿ ಸಲ್ಲಿಸಿದ್ದರು. ನೇಮಕಾತಿಗಾಗಿ ಯುಜಿಸಿ ನಿಯಮಗಳ ಪ್ರಕಾರ ಸಮಿತಿಯನ್ನು ನಿಯೋಜಿಸುವ ಬದಲು ಡಾ. ರಾಜಶ್ರೀ ಎಂಎಸ್ ಹೆಸರನ್ನμÉ್ಟೀ ಕೊಟ್ಟಿದ್ದಾರೆ. ಇದು ನಿಯಮಗಳ ಪ್ರಕಾರ ಅಲ್ಲ ಎಂದು ನ್ಯಾಯಾಲಯ ಈ ಹಿಂದೆ ಗಮನಿಸಿತ್ತು. ಇದರ ಬೆನ್ನಲ್ಲೇ ಇಂದು ನೇಮಕಾತಿ ರದ್ದುಪಡಿಸಲಾಗಿದೆ.
ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ ನೇಮಕವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್
0
ಅಕ್ಟೋಬರ್ 21, 2022
Tags