ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ಹೆತ್ತವರಿಗಾಗಿ ಮಾದಕವಸ್ತು ವಿರೋಧಿ ತಿಳುವಳಿಕಾ ಶಿಬಿರ ನಡೆಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಿದ ಮಾದಕವಸ್ತು ಜಾಗೃತಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದ ನೇರ ದೃಶ್ಯಪ್ರಸಾರವನ್ನು ಪ್ರದರ್ಶಿಸಲಾಯಿತು. ಶಾಲಾ ಮಟ್ಟದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಶಂಕರನಾರಾಯಣ ಭಟ್ ಮಾತನಾಡಿ, ಹೆತ್ತವರು ಮಕ್ಕಳ ಮೇಲೆ ಇರಿಸಬೇಕಾದ ಕಾಳಜಿಯನ್ನು ನೆನಪಿಸಿದರು. ಮುಖ್ಯೋಪಾಧ್ಯಾಯ ಇ. ಎಚ್. ಗೋವಿಂದ ಭಟ್ ಮಾತನಾಡಿ, ಮಕ್ಕಳು ಮಾದಕವಸ್ತುಗಳ ದಾಸರಾಗದಂತೆ ಹೆತ್ತವರು ಮಕ್ಕಳ ಚಲನವಲನಗಳನ್ನು ಸಮೀಪದಿಂದ ಗಮನಿಸುತ್ತಿರಬೇಕು ಎಂದು ಎಚ್ಚರಿಸಿದರು.
ಅಧ್ಯಾಪಕ ರಕ್ಷಿತ್ ಕುಮಾರ್ ಅವರು ಮಾದಕ ವಸ್ತುಗಳ ಕುರಿತಾದ ತಿಳುವಳಿಕೆಯನ್ನು, ಹೆತ್ತವರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯನ್ನು ವಿವರಿಸಿದರು. ಸ್ಟಾಫ್ ಕಾರ್ಯದರ್ಶಿ ರಾಮಕೃಷ್ಣ ಭಟ್, ಅಧ್ಯಾಪಿಕೆ ಉಷಾ ಕೆ. ಆರ್. ಹಾಗೂ ಆಧ್ಯಾಪಕ ರಾಜಕುಮಾರ್ ಉಪಸ್ಥಿತರಿದ್ದರು. ಹೆತ್ತವರ ಪ್ರತಿನಿಧಿಯಾಗಿ ಕೃಷ್ಣ ಭಟ್ ಹಾಗೂ ಚಂದ್ರಕಲಾ ಉಪಸ್ಥಿತರಿದ್ದರು. ಶಿವಪ್ರಸಾದ್ ಸಿ. ಕಾರ್ಯಕ್ರಮ ನಿರೂಪಿಸಿದರು. ಶಶಿಧರ ಕೆ. ವಂದಿಸಿದರು.
ಧರ್ಮತ್ತಡ್ಕ ಪ್ರೌಢ ಶಾಲೆಯಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ
0
ಅಕ್ಟೋಬರ್ 08, 2022
Tags