ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಿಗೇ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಸಂಸದ ಶಶಿ ತರೂರ್ ಅವರು ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನನ್ ಮಿಸ್ತ್ರಿ ಅವರಿಗೆ ಪತ್ರ ಬರೆದು ಮತಪೆಟ್ಟಿಗೆಗಳ ಮೇಲೆ ಅನಧಿಕೃತ ಸೀಲ್, ಮತಗಟ್ಟೆಗಳಲ್ಲಿ ಅನಧಿಕೃತ ವ್ಯಕ್ತಿಗಳ ಉಪಸ್ಥಿತಿ ಮುಂತಾದ ಸಮಸ್ಯೆಗಳನ್ನು ಸೂಚಿಸಿದ್ದಾರೆ. ಮತ್ತು ಮತದಾನ ಅಕ್ರಮಗಳು ಬುಗಿಲೇಳುವ ಸಾಧ್ಯತೆಗಳು ಕಂಡುಬಂದಿದೆ.
ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ತರೂರ್ ಮತ್ತು ಅವರ ತಂಡ ಆರೋಪಿಸಿದೆ. ಕೇರಳದಲ್ಲಿ ಮತಪೆಟ್ಟಿಗೆಗಳನ್ನು ಸಾಗಿಸಲು ವಿಳಂಬವಾಗಿದೆ ಎಂದು ತರೂರ್ ಕಡೆಯವರು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಚುನಾವಣಾ ಪ್ರಕ್ರಿಯೆಯನ್ನು ಅವರು ಮುಕ್ತ ಮತ್ತು ನ್ಯಾಯಸಮ್ಮತವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವರು. ಆದ್ದರಿಂದ ಉತ್ತರ ಪ್ರದೇಶದ ಎಲ್ಲಾ ಮತಗಳನ್ನು ಅಸಿಂಧು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿರುವುದಾಗಿ ತರೂರ್ ಹೇಳಿರುವರು.
ಆರೋಪದ ಬೆನ್ನಲ್ಲೇ ಸಂಸದ ರಾಜಮೋಹನ್ ಉಣ್ಣಿತ್ತಾನ್ ತರೂರ್ ಅವರ ಹೇಳಿಕೆನ್ನು ತಿರಸ್ಕರಿಸಿದರು. ಚುನಾವಣೆಯಲ್ಲಿ ಮತದಾರರಲ್ಲದವರು ಮತ ಹಾಕಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸಲಿ ಎಂದು ತರೂರ್ ಗೆ ಸವಾಲು ಹಾಕಿದರು. ತರೂರ್ ಅವರು ಚುನಾಯಿತ ಅಧಿಕಾರಿಯಾಗಿರುವ ತೆಲಂಗಾಣ ಪಿಸಿಸಿ ಚುನಾವಣೆಯಲ್ಲಿ ಏನಾದರೂ ಅವ್ಯವಹಾರ ನಡೆದಿರುವುದನ್ನು ಸಾಬೀತುಪಡಿಸಿದರೆ, ತಾನು ಸಾರ್ವಜನಿಕ ಸೇವೆಯನ್ನು ನಿಲ್ಲಿಸುವೆ ಮತ್ತು ಇಲ್ಲದಿದ್ದರೆ ತರೂರ್ ಕ್ಷಮೆಯಾಚಿಸಲು ಸಿದ್ಧರಾಗಿರಬೇಕು ಎಂದು ರಾಜಮೋಹನ್ ಉಣ್ಣಿತ್ತಾನ್ ಸವಾಲೊಡ್ಡಿರುವರು.
ಮಲ್ಲಿಕಾರ್ಜುನ ಖರ್ಗೆ 7897 ಹಾಗೂ ತರೂರ್ 1072 ಮತಗಳನ್ನು ಪಡೆದಿರುವರು. 416 ಮತಗಳು ಅಸಿಂಧುವಾಗಿವೆ ಎಂದು ಮಧುಸೂದನ್ ಮಿಸ್ತ್ರಿ ಮಾಹಿತಿ ನೀಡಿದ್ದಾರೆ.
ಚುನಾವಣೆಯಲ್ಲಿ ಅಕ್ರಮ: ಆರೋಪ ಮಾಡಿದ ತರೂರ್: ಸಾಬೀತಾದರೆ ರಾಜಕೀಯ ಜೀವನ ಅಂತ್ಯಗೊಳಿಸುವೆನೆಂದ ರಾಜ್‍ಮೋಹನ್ ಉಣ್ಣಿತ್ತಾನ್
0
ಅಕ್ಟೋಬರ್ 19, 2022
Tags