ಕಾಸರಗೋಡು: ಸೋಡಾ ಮತ್ತು ತಂಪುಪಾನೀಯ ತಯಾರಕರ ಸಂಘ, ಕೇರಳ (ಎಂಎಎಸ್‍ಎಸ್-ಕೇರಳ) ಕಾಸರಗೋಡು ಜಿಲ್ಲಾ ಸಮಿತಿಯು ಕಾಸರಗೋಡಿನಲ್ಲಿ ಗಾಜಿನ ಬಾಟಲಿಗಳಲ್ಲಿ ಉತ್ಪಾದಿಸುವ ಸೋಡಾ ಮತ್ತು ತಂಪು ಪಾನೀಯಗಳ ಬೆಲೆಯನ್ನು ನವೆಂಬರ್1ರಿಂದ ಹೆಚ್ಚಳಗೊಳಿಸುವುದಾಗಿ ಸಂಘಟನೆ ಪದಾಧಿಕಾರಿ ಎ.ವಿ ಶಶಿಧರನ್ ಉಸದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೋಡಾ ಉತ್ಪಾದನೆಗೆ ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಉತ್ಪನ್ನಗಳನ್ನು ತಯಾರಿಸುವ ಕಾರ್ಮಿಕರಿಗೆ ವೇತನ, ವಿತರಣಾ ವೆಚ್ಚ, ಪರವಾನಗಿ ಶುಲ್ಕದಲ್ಲಿ ಭಾರಿ ಹೆಚ್ಚಳದಿಂದಾಗಿ ಬೆಲೆಯೇರಿಕೆ ಅನಿವಾರ್ಯವಾಗಿದೆ. ಉತ್ಪನ್ನಗಳು ಸೋಡಾ ಬಾಕ್ಸ್‍ಗೆ ರೂ.120 ಮತ್ತು ತಂಪು ಪಾನೀಯಗಳ ಬಾಕ್ಸ್‍ಗೆ ರೂ.180 ದರ ನಿಗದಿಪಡಿಸಲಾಗಿದ್ದು, ಇದರ ಚಿಲ್ಲರೆ ಬೆಲೆ ಕ್ರಮವಾಗಿ ರೂ 8 ಮತ್ತು ರೂ 12 ಆಗಿರುತ್ತದೆ. ಕೋವಿಡ್ ಬಿಕ್ಕಟ್ಟು ಮತ್ತು ಇತರ ಕಾರಣಗಳಿಂದ ಕಳೆದ ಮೂರು ವರ್ಷಗಳಲ್ಲಿ ಐವತ್ತಕ್ಕೂ ಹೆಚ್ಚು ಕಂಪನಿಗಳನ್ನು ಮುಚ್ಚಬೇಕಾಗಿ ಬಂದಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡುವ ಈ ಉದ್ಯಮವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೆಲೆಯೇರಿಕೆ ಅನಿವಾರ್ಯವಾಗಿದ್ದು, ಸರ್ಕಾರ ಮತ್ತು ಸರ್ವಜನಿಕರೂ ಸಹಕರಿಸುಂತೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಸತ್ತಾರ್, ಶರಫುದ್ದೀನ್ ಕುಣಿಯ, ಅಬ್ದುಲ್ ಅನ್ವರ್ ಕೆ.ಎಂ ಭಾಗವಹಿಸಿದ್ದರು.
ತಂಪುಪಾನೀಯಗಳ ಬೆಲೆಯೇರಿಕೆ ಅನಿವಾರ್ಯ-ಸಂಘಟನೆ
0
ಅಕ್ಟೋಬರ್ 30, 2022
Tags