ತಿರುವನಂತಪುರ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪರಾಭವಗೊಂಡ ಶಶಿ ತರೂರ್ ಅವರನ್ನು ಸಿಪಿಎಂ ನಾಯಕ ಎಂಎ ಬೇಬಿ ಅಭಿನಂದಿಸಿದ್ದಾರೆ.
ಎಂ.ಎ.ಬೇಬಿ ತರೂರ್ ಗಳಿಸಿದ ಶೇ.10ರಷ್ಟು ಮತಗಳಿಕೆಯನ್ನು ಶ್ಲಾಘಿಸಿದರು. ಖರ್ಗೆ ಅವರು ಶಶಿ ತರೂರ್‍ಗಿಂತ ಹೆಚ್ಚು ಸಮರ್ಥರಿರುವುದರಿಂದ ಅಥವಾ ಕಾಂಗ್ರೆಸ್‍ನಲ್ಲಿ ಅವರಿಗೆ ಹೆಚ್ಚಿನ ಬೆಂಬಲವಿದೆ ಎಂಬ ಕಾರಣಕ್ಕಾಗಿ ಅಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಎಂ.ಎ.ಬೇಬಿ ಫೇಸ್‍ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ನೆಚ್ಚಿನ ನಾಯಕರಲ್ಲಿ ಶಶಿ ತರೂರ್ ಒಬ್ಬರಲ್ಲ ಎಂಬುದು ಎಲ್ಲರಿಗೂ ಗೊತ್ತು. ಕೇರಳದ ಕಾಂಗ್ರೆಸ್ ನಾಯಕರು ತಮ್ಮ ಅಸಮಾಧಾನವನ್ನು ಎಂದಿಗೂ ಮರೆಮಾಚುವುದಿಲ್ಲ. ಈ ಚುನಾವಣೆಯ ಸಂದರ್ಭದಲ್ಲಿಯೇ ಎ.ಕೆ.ಆಂಟನಿ, ರಮೇಶ್ ಚೆನ್ನಿತ್ತಲ, ಕೆ.ಸುಧಾಕರನ್, ಕೋಡಿಕುನ್ನಿಲ್ ಸುರೇಶ್ ಮತ್ತು ಮುಲ್ಲಪಳ್ಳಿ ರಾಮಚಂದ್ರನ್ ಸಾರ್ವಜನಿಕವಾಗಿ ತರೂರ್ ವಿರುದ್ಧ ಹರಿಹಾಯ್ದಿದ್ದರು.
ಸೋನಿಯಾ ಕುಟುಂಬಕ್ಕೆ ಸಂಪೂರ್ಣ ನಿμÉ್ಠ ಇಲ್ಲದವರು ಕಾಂಗ್ರೆಸ್ ನಲ್ಲಿ ಹೆಚ್ಚು ದಿನ ಇರಲಾರರು ಎಂಬುದು ಇತಿಹಾಸ. ಶಶಿ ತರೂರ್ ಮುಂದೆ ಏನು ಮಾಡಲು ಯೋಜಿಸುತ್ತಿದ್ದಾರೆ? ಈ ಅವಮಾನವನ್ನು ಸಹಿಸಿಕೊಂಡು ಅಲ್ಲೇ ಇರಲು ಹೊರಟಿದ್ದಾರಾ ಅಥವಾ ಕಾಂಗ್ರೆಸ್ ನಿಂದ ಹೊರ ಬರಬೇಕೆ ವಿನಃ ಚುನಾವಣಾ ಸೋಲಿನಿಂದ ಉಂಟಾದ ಬಿರುಕು ವಾಸಿ ಮಾಡುವುದೇ ಅವರ ಉದ್ದೇಶವೇ ಎಂದು ಎಂಎ ಬೇಬಿ ಪ್ರಶ್ನಿಸಿದರು.
ತರೂರ್ ಅವರು ಕಾಂಗ್ರೆಸ್ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ನೆಹರೂ ಮತ್ತು ಕಾಂಗ್ರೆಸ್ ಬಗ್ಗೆ ಬಹಳ ವಿಮರ್ಶಾತ್ಮಕವಾಗಿ ಬರೆದಿದ್ದಾರೆ. ಅವರು ತಮ್ಮ ಸ್ವಾಭಾವಿಕ, ಸೆಕ್ಯುಲರಿಸಂಗೆ ಮರಳುತ್ತಾರೆಯೇ ಎಂದು ಎಂ.ಎ.ಬೇಬಿ ಕೇಳಿರುವರು.
ಮುಂದೆ ಏನು ಮಾಡಬೇಕಿಂದಿದ್ದಾರೆ? ಅವಮಾನವನ್ನು ಸಹಿಸಿಕೊಂಡು ಅಲ್ಲೇ ಉಳಿಯುವಿರಾ?: ಪರೋಕ್ಷವಾಗಿ ತರೂರ್ ಅವರನ್ನು ಎಡಪಕ್ಷಗಳಿಗೆ ಸ್ವಾಗತಿಸಿದ ಎಂ.ಎ.ಬೇಬಿ
0
ಅಕ್ಟೋಬರ್ 19, 2022