ಕಾಸರಗೋಡು: ಕಲೆಕ್ಟರೇಟ್ ನಲ್ಲಿ ಐಟಿ ಮಿಷನ್ ಅಕ್ಷಯ ಜಿಲ್ಲಾ ಪ್ರಾಜೆಕ್ಟ್ ಕಛೇರಿ ಕಾರ್ಯಾರಂಭಗೊಂಡಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಕಛೇರಿ ಉದ್ಘಾಟಿಸಿದರು. ರಾಜ್ಯ ಐಟಿ ಮಿಷನ್ ಅಧೀನದಲ್ಲಿ ಕಾಸರಗೋಡು ತಾಯಲಂಗಡಿ ರೈಲು ನಿಲ್ದಾಣ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಛೇರಿ ಕಲೆಕ್ಟರೇಟ್‌ಗೆ ಸ್ಥಳಾಂತರ ಗೊಂಡಿರುವುದು.
ಅಕ್ಷಯ ಕೇಂದ್ರಗಳು ಮತ್ತು ಅವುಗಳ ಸೇವೆಗಳು ಮತ್ತು ಚಟುವಟಿಕೆಗಳನ್ನು ಸಂಘಟಿಸುವ ಜಿಲ್ಲಾ ಮಟ್ಟದ ಕಛೇರಿಯಾಗಿದೆ ಅಕ್ಷಯ ಜಿಲ್ಲಾ ಯೋಜನಾ ಕಛೇರಿ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ. ಪಿ. ರಾಜ್ ಮೋಹನ್, ಹಣಕಾಸು ಅಧಿಕಾರಿ ಎನ್. ಶಿವಪ್ರಕಾಶನ್ ನಾಯರ್,
ಜಿಲ್ಲಾ ಕಾನೂನು ಅಧಿಕಾರಿ ಕೆ. ಮುಹಮ್ಮದ್ ಕುಂಞಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಸಜಿತ್ ಕುಮಾರ್, ಎಲ್ ಎಸ್ ಜಿ ಡಿ ಜಂಟಿ ನಿರ್ದೇಶಕ ಜೈಸನ್ ಮ್ಯಾಥ್ಯೂ, ಗಿರಿಜನ ಅಭಿವೃದ್ಧಿ ಅಧಿಕಾರಿ ಎಂ. ಮಲ್ಲಿಕಾ, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ನಾಗರಿಕ ಸರಬರಾಜು ಇಲಾಖೆ ರಾಜ್ಯ ಯೋಜನಾಧಿಕಾರಿ ಶ್ರೀರಾಜ್ ಪಿ .ನಾಯರ್, ಸರ್ವೆ ಉಪ ನಿರ್ದೇಶಕ ಎಸ್. ಸಲೀಂ, ಅಕ್ಷಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ಎಸ್. ನಿವೇದ್, ಸಹಾಯಕ ಯೋಜನಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.