HEALTH TIPS

ಬೆಳಕು ಚೆಲ್ಲುವ ಹಬ್ಬ -ದೀಪಾವಳಿ: ಕವನ




ದೀಪಗಳ ಹಬ್ಬವಿದು ದೀಪಾವಳಿ
ಮುಗ್ಧ ಮನಕಿದು ಸಂಭ್ರಮದ ತಾರಾವಳಿ/
 ಸುತ್ತಲು ಬೆಳಗಿವೆ ಸಾಲಾಗಿ ಹಣತೆಗಳು ಹಬ್ಬದ ಸಡಗರ ಕಾಣಿಸುತಿದೆ ಮೇದಿನಿಯೊಳು//

ಕವಿದ ಕತ್ತಲೆಯ  ಜಾಡ್ಯವ ಕಳೆದು ಪಸರಿಸುತಿದೆ ಹರುಷದ ಹೊನಲ ನಗೆ/ ತನು ಮನ ತಣಿಸುವ ಒಡಲೊಳು ವಿಜೃಂಭಿಸುವ 
ಕಾಂತಿಯನ್ನೇ ತಂದಿದೆ ದೀಪಾವಳಿ ಇಳೆಗೆ//

 ದೀಪದಿಂದ ದೀಪವ ಬೆಳಗಿದಂತೆ ಬೆಳೆಯಲಿ ಜ್ಞಾನವೆಂಬ ಸಾಗರ/ ಅಜ್ಞಾನವು ನಶಿಸಿ ಅರಿಷಟ್ ವೈರಿಗಳೆಲ್ಲ ತೊಲಗಿ 
ದಿನ ದಿನವು ಏರಲಿ ಕೀರ್ತಿಯೆಂಬ ಶಿಖರ//

 ಕೆಟ್ಟ ಗುಣಗಳ ಸುಟ್ಟು ಅರಿವೆಂಬ ದೀವಟಿಗೆಯ ಬೆಳಗಲು ಸಕಾಲವಿದು/ ಆಡಂಬರವಿಲ್ಲದೆ ಆಚರಣೆಯ ಮೂಲಕವೇ 
ಜಗಕ್ಕೆ ಸಾರವ ತಿಳಿಸುವ ಹಬ್ಬ ದೀಪಾವಳಿಯಿದು//

                                                                  -ಅನ್ನಪೂರ್ಣ ಯನ್ ಕುತ್ತಾಜೆ.

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries