ಮುಳ್ಳೇರಿಯ: ಗೋಸಂಪತ್ತು ಇರುವ ಮನೆ ಐಶ್ವರ್ಯದಿಂದ ಕೂಡಿರುತ್ತದೆ. ಗೋವು ರಾಷ್ಟ್ರದ ಸಂಪತ್ತು, ಸಂಗೀತ ಹಾಗೂ ಇನ್ನಿತರ ಕಲೆಗಳು ನಮ್ಮ ಸಂಸ್ಕøತಿಯಾಗಿದೆ. ನಮ್ಮೊಳಗೆ ಸಂಸ್ಕøತಿಯನ್ನು ಹುಟ್ಟಿಸುವ ಇಂತಹ ಕಾರ್ಯಕ್ರಮ ಶ್ಲಾಘನೀಯ. ಖ್ಯಾತನಾಮರಿಂದ ಗೋಮಾತೆಯ ಸನ್ನಿಧಿಯಲ್ಲಿ ಸಂಗೀತ ಸೇವೆಯನ್ನು ಗೋಮಾತೆಗೆ ಅರ್ಪಣೆ ಮಾಡಲಾಗಿದೆ. ಇಂತಹ ಉತ್ತಮ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಭಾನುವಾರ ಪೆರಿಯ ಗೋಕುಲಂ ಗೋಶಾಲೆಯಲ್ಲಿ ಒಂದು ವಾರಗಳಿಂದ ಜರಗಿದ ದೀಪಾವಳಿ ಸಂಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವವಚನವನ್ನು ನೀಡಿ ಮಾತನಾಡಿ, ಗೋಶಾಲೆಯನ್ನು ನಡೆಸುವುದು ತುಂಬ ಕಷ್ಟದ ಕೆಲಸ. ಗೋವಿನ ಮೇಲೆ ಪ್ರೀತಿ ಇದ್ದರೆ ಮಾತ್ರ ಗೋಶಾಲೆಯನ್ನು ನಡೆಸಲು ಸಾಧ್ಯವಾಗುತ್ತದೆ. ಗೋವಿನ ಆರಾಧನೆಯನ್ನು ಮಾಡಬೇಕಾದರೆ ದೈವಾನುಗ್ರಹವಿರಬೇಕು. ಗೋಸೇವೆಗೆ ಎಲ್ಲರೂ ನಿರಂತರ ಸಹಕರಿಸಬೇಕು. ಗೋಸೇವೆಯು ಕೃಷ್ಣನ ಸೇವೆಗೆ ತುಲ್ಯವಾಗಿದೆ. ಗೋವು ಮನುಷ್ಯ ಜೀವನದ ಕೊಂಡಿಯಾಗಿರುವುದಲ್ಲದೆ ಸಿರಿವಂತದ ಲಕ್ಷಣವಾಗಿದೆ. ಸನಾತನ ದೇಶ ನಮ್ಮದಾಗಬೇಕು. ಗೋಸಂತತಿಯ ರಕ್ಷಣೆ, ವೇದ ಸಾಹಿತ್ಯಗಳ ರಕ್ಷಣೆ ಆಗಬೇಕು. ಗೋಸೇವೆಯ ಮೂಲಕ ನಾವು ಮನುಷ್ಯರಾಗೋಣ ಎಂದರು. ಜ್ಯೋತಿಷಿ ವಿಷ್ಣುಪ್ರಸಾದ್ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಹಿರಿಯ ವಿದ್ವಾಂಸ ಡಾ. ಶಂಕರನಾರಾಯಣ ಜೋಯಿಷ್, ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಉದುಮ ಶಾಸಕ ಸಿ.ಎಚ್.ಕುಂಞಂಬು, ವೇದಮೂರ್ತಿ ಸುಬ್ರಹ್ಮಣ್ಯ ಅಡಿಗ ಕೊಲ್ಲೂರು, ಡಾ. ರಾಮನಾಥನ್, ಮಹಾವೀರ ಸೋನಿಕಾ ಬೆಂಗಳೂರು, ಮಾಜಿ ಶಾಸಕ ಕೆ.ಕುಂಞÂರಾಮನ್, ಸಂಗೀತಜ್ಞ ವಿಜಯ್ ನೀಲಕಂಠನ್, ಡಾ. ರಾಘವೇಂದ್ರ ಪ್ರಸಾದ್, ಜನನಿ, ಚಿತ್ರನಟ ಸಂತೋಷ್ ಕಿಯಾಟುರ್, ಡಾ. ನಾಗರತ್ನ ವಿಷ್ಣುಪ್ರಸಾದ್ ಉಪಸ್ಥಿತರಿದ್ದು ಶುಭಹಾರೈಸಿದರು. ಚೆರುವಳ್ಳಿ ನಾರಾಯಣನ್ ನಂಬೂದಿರಿ, ವಿದ್ವಾನ್ ಸದಾಶಿವ ಆಚಾರ್ಯ ಕಾಸರಗೋಡು, ಮಹಾವೀರ ಸೋನಿಕಾ ಬೆಂಗಳೂರು ಇವರಿಗೆ ಪರಂಪರಾ ಅವಾರ್ಡ್ 2022 ಪ್ರದಾನ ಮಾಡಲಾಯಿತು.