HEALTH TIPS

ಸೇವೆಗಳ ವ್ಯತ್ಯಯ: ಸರ್ಕಾರಕ್ಕೆ ವರದಿ ಸಲ್ಲಿಸಿದ ವಾಟ್ಸ್ ಆಪ್

 

         ನವದೆಹಲಿ: ಮೆಸೇಜಿಂಗ್ ವೇದಿಕೆ ವಾಟ್ಸ್ ಆಪ್ ಇತ್ತೀಚೆಗೆ ತನ್ನ ಸೇವೆಗಳಲ್ಲಿ ಉಂಟಾದ ವ್ಯತ್ಯಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. 

             ಮಂಗಳವಾರ (ಅ.25) ರಂದು 2 ಗಂಟೆಗಳ ಕಾಲ ಗ್ರಾಹಕರು ವಾಟ್ಸ್ ಆಪ್ ಸೇವೆಗಳನ್ನು ಬಳಕೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಐಟಿ ಸಚಿವಾಲಯ ವಾಟ್ಸ್ ಆಪ್ ನಿಂದ ವರದಿ ಕೇಳಿತ್ತು. ಈ ಹಿನ್ನೆಲೆಯಲ್ಲಿ ವಾಟ್ಸ್ ಆಪ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದಕ್ಕೆ ಕಾರಣಗಳನ್ನು ನೀಡಿದೆ. 

             ವರದಿಯ ವಿವರಗಳು ಪೂರ್ಣವಾಗಿ ಬಹಿರಂಗಗೊಂಡಿಲ್ಲ. ಈ ವಿಷಯವಾಗಿ ಸುದ್ದಿಮನೆಗಳು ವಾಟ್ಸ್ ಆಪ್ ಗೆ ಇ-ಮೇಲ್ ಕಳಿಸಿದ್ದರೂ ಅದಕ್ಕೆ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಿದೆ. ಮಂಗಳವಾರದಂದು ರಾತ್ರಿ ಸ್ಪಷ್ಟನೆ ನೀಡಿದ್ದ ವಾಟ್ಸ್ ಆಪ್ ತಾಂತ್ರಿಕ ದೋಷದಿಂದಾಗಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ಹೇಳಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries