ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿಜಯಂತಿ ಆಚರಣೆಯು ಇತ್ತೀಚೆಗೆ ಜರಗಿತು. ಆಚರಣೆಯ ಅಂಗವಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ಶರೀಫ್ , ಶಾಲಾ ರಕ್ಷಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಪರಿಸರ ಶುಚಿತ್ವ ನಡೆಸಿದರು.ಆ ಬಗಗೆ ನಡೆದ ಸಭಾ ಸಮಾರಂಭದಲ್ಲಿ ಯಸ್.ಯಂ.ಸಿ. ಉಪಾಧ್ಯಕ್ಷ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದು ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ಶರೀಫ್ ಮತ್ತು ಮಾತೃಸಂಘ ಅಧ್ಯಕ್ಷೆ ರಸೀನ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ಗಾಂಧಿಯವರ ಬದುಕು ಹಾಗೂ ಆದರ್ಶಗಳು ಇಂದಿಗೂ ಹೇಗೆ ಪ್ರಸ್ತುತ ಎನ್ನುವ ಬಗ್ಗೆ ವಿಚಾರ ಮಂಡಿಸಿದರು. ಶಾಲಾ ಶಿಕ್ಷಕಿ ಅನಿತ ಕುಮಾರಿ ಸ್ವಾಗತಿಸಿ ಶಿಕ್ಷಕ ರಿಯಾಸ್ ವಂದಿಸಿದರು.